National
ರಾಜಸ್ಥಾನಕ್ಕೆ ಬಂದಿಳಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಜೈಪುರ: ಜುಲೈ ತಿಂಗಳ 4ರಿಂದ 10ರ ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಸಭೆ ನಡೆಯಲಿದೆ.
ರಾಜಸ್ಥಾನದ ಜುಂಜುನು ಅಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ.
ರೈಲಿನಲ್ಲಿ ಜೈಪುರಕ್ಕೆ ಬಂದಿರುವ ಅವರು ರವಿವಾರ ಆಚಾರ್ಯ ಮಹಾಶ್ರಮಣ್‌ರನ್ನು ಭೇಟಿ ಮಾಡಲಿದ್ದಾರೆ.
ಅನಂತರ ಜುಂಜುನು ಅಲ್ಲಿ ತಂಗಲಿದ್ದಾರೆ. ಆರ್‌ಎಸ್‌ಎಸ್ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಸೇರಿ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.