fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentNational

ಪ್ರಭಾಸ್-ಅನುಷ್ಕಾ; ಕಾಮಿಡಿ ಚಿತ್ರದಲ್ಲಿ ಮತ್ತೆ ಒಂದಾಗಲಿದ್ದಾರೆ ಮಿರ್ಚಿ ಜೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ತೆರೆಯ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಸೂಪರ್​ಹಿಟ್ ಎನಿಸಿಕೊಂಡಿರುವ ಜೋಡಿಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಕೂಡ ಪ್ರಮುಖರು. 2009ರಲ್ಲಿ ‘ಬಿಲ್ಲಾ’, 2013ರಲ್ಲಿ ‘ಮಿರ್ಚಿ’, 2015ರಲ್ಲಿ ‘ಬಾಹುಬಲಿ – ದಿ ಬಿಗಿನಿಂಗ್’ ಹಾಗೂ 2017ರಲ್ಲಿ ‘ಬಾಹುಬಲಿ – ದಿ ಕನ್​ಕ್ಲೂಷನ್’ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.

ಕಳೆದ ಈ ಐದು ವರ್ಷಗಳಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಮತ್ತೆ ಒಟ್ಟಿಗೆ ನಟಿಸಿಲ್ಲ. ಮತ್ತೆ ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದರು. ಈಗ ಆ ಕಾಲ ಸನ್ನಿಹಿತವಾದಂತಿದೆ.

ಹೌದು, ಪ್ರಭಾಸ್ ಮತ್ತು ಅನುಷ್ಕಾ ಮತ್ತೆ ಒಂದಾಗಲಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು. ‘ಬಾಬು ಬಂಗಾರಂ’, ‘ಮಹಾನುಭಾವುಡು’ ಸೇರಿದಂತೆ ಇತ್ತೀಚೆಗಷ್ಟೇ ರಿಲೀಸ್ ಆದ ‘ಪಕ್ಕಾ ಕಮರ್ಷಿಯಲ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿರುವ ಮಾರುತಿ ಈ ಚಿತ್ರ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇದೊಂದು ಔಟ್ ಆಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ‘ರಾಜಾ ಡಿಲಕ್ಸ್’ ಎಂದು ಟೈಟಲ್ ಇಡಲಾಗಿದೆಯಂತೆ. ಪ್ರಭಾಸ್​ಗೆ ಮೂವರು ನಾಯಕಿಯರು ಇರಲಿದ್ದು, ಅವರಲ್ಲಿ ಅನುಷ್ಕಾ ಶೆಟ್ಟಿ ಒಬ್ಬ ನಾಯಕಿಯ ಸ್ಥಾನಕ್ಕೆ ಅಂತಿಮವಾಗಿದ್ದಾರೆ ಎನ್ನಲಾಗಿದೆ. ಉಳಿದ ಇಬ್ಬರು ನಾಯಕಿಯರ ಕುರಿತು ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಎಲ್ಲವೂ ಅಂದುಕೊಂಡಂತಾದರೆ ದಸರಾ ಹಬ್ಬಕ್ಕೆ ಚಿತ್ರದ ಘೋಷಣೆಯಾಗಲಿದ್ದು, ವರ್ಷಾಂತ್ಯಕ್ಕೆ ಸೆಟ್ಟೇರಲಿದೆಯಂತೆ. ಇನ್ನು 2020ರ ‘ನಿಶ್ಶಬ್ದಂ’ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಮತ್ತೊಂದೆಡೆ ಪ್ರಭಾಸ್ ‘ಸಾಹೋ’, ‘ರಾಧೇ ಶ್ಯಾಮ್ ಚಿತ್ರಗಳಲ್ಲಿ ನಟಿಸಿ ಸದ್ಯ ‘ಸಲಾರ್’, ‘ಆದಿಪುರುಷ್’ ಹಾಗೂ ‘ಪ್ರಾಜೆಕ್ಟ್ ಕೆ’ ಚಿತ್ರಗಳಲ್ಲಿ ಬಿಜಿ ಇದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: