BIG NEWS: ಬೆಚ್ಚಿಬಿದ್ದ ಬೆಂಗಳೂರು ಜನತೆ: ಮಹಿಳೆಯನ್ನು ಅತ್ಯಾಚಾರವೆಸಗಿ ಸುಟ್ಟು ಹತ್ಯೆ.?

ಬೆಂಗಳೂರು: ನಗರದಲ್ಲಿ ದಿನೇ ದಿನೇ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪೊಲೀಸರು ಎಷ್ಟೇ ನಿಯಂತ್ರಣ ಕ್ರಮವಹಿಸಿದ್ರೂ ಕ್ರೈಂ ಸಂಖ್ಯೆ ನಿಯಂತ್ರಣಗೊಂಡಿಲ್ಲ. ಇದೀಗ ಮಹಿಳೆಯೊಬ್ಬರ ಮೇಲೆ ಸಿಲಿಕಾನ್ ಸಿಟಿಯಲ್ಲಿ ಅತ್ಯಾಚಾರವೆಸಗಿ, ಸುಟ್ಟು ಹಾಕಿರೋ ಶಂಕೆಯ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ಸಮೀಪದ ರಾಮಸಂದ್ರದಲ್ಲಿ ಸುಮಾರು 25-30 ವರ್ಷದ ಮಹಿಳೆಯ ಶವ ಸುಟ್ಟ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಸುಟ್ಟು ಹೋಗಿರುವಂತ ಸ್ಥಿತಿಯಲ್ಲಿ ಪತ್ತೆಯಾಗಿರುವಂತ ಮಹಿಳೆಯನ್ನು ಅತ್ಯಾಚಾರವೆಸಗಿ ಈ ರೀತಿಯಾಗಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ.
ಗುರುತೇ ಸಿಗದಂತೆ ಸುಟ್ಟು ಹೋಗಿರುವಂತ ಮಹಿಳೆಯ ಗುರುತು ಪತ್ತೆಗಾಗಿ ಹರಸಾಹಸ ಪಡುತ್ತಿದ್ದಾರೆ. ನಗರದಲ್ಲಿ ನಾಪತ್ತೆಯಾಗಿರುವಂತ ಮಹಿಳೆಯ ಪ್ರಕರಣಗಳ ಮಾಹಿತಿ ಪಡೆದು, ಸುಟ್ಟು ಹೋಗಿರುವಂತ ಮಹಿಳೆಯ ಗುರುತು, ಹೋಲಿಕೆಯಾಗಲಿದ್ಯಾ ಎನ್ನೋ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.