Crime NewsKarnataka News
ಬೆಳಗಾವಿ ರೈಲ್ವೆ ಟ್ರ್ಯಾಕ್ ಮೇಲೆ ಮೃತ ದೇಹ ಪತ್ತೆ..!!

ಬೆಳಗಾವಿಯ ಕೋಟೆ ಹಿಂದಿನ ಸಮರ್ಥ ನಗರದ ರೈಲ್ವೇ ಟ್ರ್ಯಾಕ್ ಮೇಲೆ ಹಳೆ ಗಾಂಧಿ ನಗರದ ನಿವಾಸಿ ಹುಸೇನ್ ಶೇಖ್ ಮೇತದೇಹ ಪತ್ತೆಯಾಗಿದೆ.
ಬೆಳಗಾವಿಯ ಕೋಟೆ ಹಿಂದೆ ಸಮರ್ಥನಗರದ ರೈಲು ಟ್ರ್ಯಾಕ್ ಮೇಲೆ ಹಳೆ ಗಾಂಧಿ ನಗರದ ನಿವಾಸಿ ಹುಸೇನ್ ಶೇಖ್ ಮೃತದೇಹ ಪತ್ತೆಯಾಗಿದೆ. ಘಟನೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಮೃತ ಹುಸೇನ್‌ಗೆ ಎರಡು ಮಕ್ಕಳಿದ್ದಾರೆ. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ ಮನೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ.
ಆದರೆ ಹುಸೇನ್ ಶವವಾಗಿ ಸಮರ್ಥನಗರದ ರೈಲ್ವೇ ಟ್ರ್ಯಾಕ್ ಮೇಲೆ ಪತ್ತೆಯಾಗಿದ್ದಾನೆ. ವಿಷ಼ಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನು ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.