ಕೇರವಾಡದಿಂದ ಬುರಣಕಿ ಕ್ರಾಸ್ ವರೆಗೂ ಹದಗೆಟ್ಟ ರಸ್ತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸುಧಾರಣೆಗೆ ಸ್ಥಳೀಯರ ಆಗ್ರಹ

ಕೇರವಾಡದಿಂದ ಬುರಣಕಿ ಕ್ರಾಸ್ ವರೆಗೂ ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಅದನ್ನು ಸುಧಾರಣೆ ಮಾಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗಡಿ ತಾಲ್ಲೂಕು ಖಾನಾಪುರ ವಿಧಾನಸಭಾ ಕ್ಷೇತ್ರದ ಕೊನೆ ಗಡಿ ಗ್ರಾಮ ಪಂಚಾಯಿತಿ ಕೇರವಾಡ ಗ್ರಾಮದಿಂದ ಆರು ವರೆ ಕಿಲೋಮೀಟರ್ ವ್ಯಾಪ್ತಿಯ ಬುರಣಕಿ ಕ್ರಾಸ್ ವರೆಗೂ ಇರುವ ಜಿಲ್ಲಾ ಪಂಚಾಯತ್ ರಸ್ತೆಯು ಕಳೆದ ೮ ವರ್ಷಗಳಿಂದ ತುಂಬಾನೇ ಹದಗೆಟ್ಟಿದ್ದು, ರಸ್ತೆಯಲ್ಲಿ ಸಾಕಷ್ಟು ತಗ್ಗು ಗುಂಡಿಗಳಾಗಿ ದಿನನಿತ್ಯ ಈ ರಸ್ತೆಯ ಮೂಲಕ ವಾಹನಗಳು ಹಾಗೂ ಸವಾರರು ಹಾಗೂ ಪ್ರಯಾಣಿಕರು ದಿನ ನಿತ್ಯ ಓಡಾಡಬೇಕಾದ್ರೆ ಸಾಕಷ್ಟು ತೊಂದರೆಗೆ ಒಳಪಡುತ್ತಿದ್ದಾರೆ, ಇನ್ನೂ ಕಳೆದ ೩ ವರ್ಷಗಳಲ್ಲಿ ಈ ಹದಗೆಟ್ಟ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿರುವ ಪ್ರಕರಣಗಳು ಇವೆ.
ಇನ್ನೂ ದಿನನಿತ್ಯ ಈ ರಸ್ತೆಯ ಮೂಲಕ ಸೈಕಲ್ ನಲ್ಲಿ ತೆರಳುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಾಗಿರುವ ತಗ್ಗು ಗುಂಡಿಗಳಲ್ಲಿ ನೀರು ತುಂಬಿ ತುಂಬಾನೇ ತೊಂದರೆಯಾಗುತ್ತಿದೆ. ಇನ್ನೂ ಈ ಹದಗೆಟ್ಟ ರಸ್ತೆಯನ್ನು ಸುಧಾರಣೆ ಮಾಡಿ ಧುರಸ್ತಿಗೊಳಿಸುವಂತೆ ಪದೇ ಪದೇ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಭಿಯಂತರರು ಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ರಿಪೇರಿ ಮಾಡಿಸಿಕೊಡಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.