Feature articlesKarnataka NewsNational
Agnipath Recruitment 2022: 2,800 ಅಗ್ನಿವೀರರ ನೇಮಕಾತಿಗೆ ನೌಕಾಪಡೆಯಿಂದ ಅಧಿಸೂಚನೆ: ಜುಲೈ.15ರಿಂದ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ: ಭಾರತೀಯ ನೌಕಾಪಡೆಯಿಂದ 2,800 ಅಗ್ನಿವೀರರ ನೇಮಕಾತಿಗಾಗಿ ( Agnipath Recruitment 2022 ) ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಜುಲೈ.15ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ.
ಈ ಸಂಬಂಧ ಭಾರತೀಯ ನೌಕಾಪಡೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಜುಲೈ.9ರಂದು 2,800 ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಜುಲೈ.15ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಿದೆ. ಜುಲೈ.24ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ನೊಂದಣಿ ಪ್ರಕ್ರಿಯೆ ಮುಗಿದ ಬಳಿಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ಅಂದಹಾಗೇ ಅಗ್ನಿವೀರ ವಾಯು ಹುದ್ದೆಗಳ ನೇಮಕಾತಿಗೆ ಜೂನ್ 29ರವರೆಗೆ ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ತಪ್ಪು ವಿವರ ಸಲ್ಲಿಸಿದ್ರೇ.. ಅಂತಹ ಅಭ್ಯರ್ಥಿಗಳನ್ನು ಯಾವುದೇ ವಿವರಣೆ ನೀಡದೇ ಅನರ್ಹಗೊಳಿಸಲಾಗುತ್ತದೆ ಎಂಬುದಾಗಿ ಎಎಎಫ್ ಎಚ್ಚರಿಕೆ ನೀಡಿದೆ.