
ಮುಂಬಯಿ: ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ನೇತೃತ್ವದ ನೂತನ ಸರಕಾರ ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುವ ಮೂಲಕ ಶಿಂಧೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಾದಿ ಸುಗಮವಾದಂತಾಗಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಪರ 164 ಮತಗಳು ಚಲಾವಣೆಯಾಗಿದ್ದವು. ಒಟ್ಟು 288 ಸದಸ್ಯ ಬಲವನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 144 ಸ್ಥಾನಗಳ ಅಗತ್ಯವಿತ್ತು. ನಿರೀಕ್ಷೆಯಂತೆ ಸಿಎಂ ಶಿಂಧೆ ವಿಶ್ವಾಮತ ಯಾಚನೆಯಲ್ಲಿ ಗೆಲುವು ಪಡೆದಿದ್ದಾರೆ.
ಇದೇ ವೇಳೆ ಭಾನುವಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ಶಾಸಕ ರಾಹುಲ್ ನರ್ವೇಕರ್ ಆಯ್ಕೆಯಾಗಿದ್ದಾರೆ.