National
BREAKING NEWS: |Sidhu Moose Wala killer arrest ಸಿಧು ಮೂಸೆವಾಲಾ ಕೊಲೆ ಹಂತಕ ಅಂಕಿತ್ ಸಿರ್ಸಾನನ್ನು ಬಂಧಿಸಿದ ದೆಹಲಿ ಪೊಲೀಸ್

ಪಂಜಾಬ್ : ಮೇ 29 ರಂದು ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಅಂಕಿತ್ ಸಿರ್ಸಾನನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಅವರ ಸಹಚರರೊಂದಿಗೆ ಬಂಧಿಸಿದೆ.
ಎನ್ಡಿಆರ್ ತಂಡವು ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಮೈತ್ರಿಯ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಬಂಧಿಸಿದೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಅಂಕಿತ್ ಕೂಡ ಒಬ್ಬ. ಈತ ರಾಜಸ್ಥಾನದಲ್ಲಿ ನಡೆದ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ.
ಇತರ ಬಂಧಿತ ಆರೋಪಿ ಸಚಿನ್ ಭಿವಾನಿ, ಸಿಧು ಮೂಸೆವಾಲಾ ಪ್ರಕರಣದಲ್ಲಿ ನಾಲ್ವರು ಶೂಟರ್‌ಗಳಿಗೆ ಆಶ್ರಯ ನೀಡಿದ್ದರು ಎನ್ನಲಾಗುತ್ತಿದೆ.