Karnataka NewsNational
ಬೆಳಗಾವಿ ನೂತನ ಎಸ್ ಪಿಯಾಗಿ ಡಾ. ಸಂಜೀವ ಪಾಟೀಲ ಅಧಿಕಾರ ಸ್ವೀಕಾರ
ಎಸ್‍ಪಿ ಡಾ.ಸಂಜೀವ್ ಪಾಟೀಲ್‍ಗೆ ಅಧಿಕಾರ ಹಸ್ತಾಂತರಿಸಿದ ನಿರ್ಗಮಿತ ಎಸ್‍ಪಿ ಲಕ್ಷ್ಮಣ ನಿಂಬರಗಿ

ನೂತನ ಬೆಳಗಾವಿ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಅವರಿಗೆ ನಿರ್ಗಮಿತ ಎಸ್‍ಪಿ ಲಕ್ಷ್ಮಣ ನಿಂಬರಗಿ ಅಧಿಕಾರ ಹಸ್ತಾಂತರಿಸಿದರು.
ನಾಲ್ಕು ದಿನಗಳ ಹಿಂದೆ ಡಾ.ಸಂಜೀವ್ ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಹೀಗಾಗಿ ನಿಕಟಪೂರ್ವ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರು ನೂತನ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಅವರಿಗೆ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರು ಪಶ್ಚಿಮ ಡಿಸಿಪಿ ಆಗಿದ್ದ ಡಾ. ಸಂಜೀವ್ ಪಾಟೀಲ. ಇದೀಗ ಇವರ ಸ್ಥಾನಕ್ಕೆ ನಾಳೆ ಬೆಂಗಳೂರು ಡಿಸಿಪಿ ಆಗಿ ಲಕ್ಷ್ಮಣ ನಿಂಬರಗಿ ಅಧಿಕಾರ ಸ್ವೀಕರಿಸಲಿದ್ದಾರೆ.