Karnataka NewsNational
ಕರ್ನಾಟಕದ ಸಿನಿ ಶೆಟ್ಟಿ 2022ರ ಮಿಸ್ ಇಂಡಿಯಾ

ಮುಂಬೈ : ಕರ್ನಾಟಕದ ಸಿನಿ ಶೆಟ್ಟಿ 2022ರ ಮಿಸ್ ಇಂಡಿಯಾ-2 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದಂತ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಜೇತರಾಗಿದ್ದು, ರಾಜಸ್ಥಾನದ ರುಬಲ್ ಶೆಖಾವತ್ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್ 1ನೇ ಮತ್ತು 2ನೇ ರನ್ನರ್ ಅಪ್ ಆಗಿದ್ದಾರೆ.
ಅಂದಹಾಗೇ ಸಿನಿ ಶೆಟ್ಟಿ ಅವರು ದಕ್ಷಿಣ ಕನ್ನಡ ಮೂಲದವರು. ಭರತನಾಟ್ಯ ಕಲಾವಿಧೆಯಾಗಿದ್ದ ಇವರು, ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.