ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್: ಟ್ವೀಟ್ ಮಾಡಿದ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ದೂರು

ನವದೆಹಲಿ, ಜು. 4: ತಾವು ಇತ್ತೀಚೆಗೆ ನಿರ್ದೇಶಿಸಲಿರುವ ಮುಂದಿನ ಚಿತ್ರದ ಭಾಗವಾಗಿ ಕಾಳಿ ದೇವಿ ಸಿಗರೇಟು ಸೇದುತ್ತಿದ್ದ ಪೋಸ್ಟರ್ ಅನ್ನು ಟ್ವೀಟ್ ಮಾಡಿದ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ದೂರು ದಾಖಲಾಗಿದೆ.
ನಿರ್ದೇಶಕಿ ಲೀನಾ ಮಣಿಮೇಕಲೈ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಾಳಿ ಶೀರ್ಷಿಕೆಯ ಚಿತ್ರದ ಪೋಸ್ಟರ್ ಹಿಂದೂ ದೇವತೆ ಕಾಳಿಯ ವೇಷದಲ್ಲಿ ಮಹಿಳೆಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ತೋರಿಸುತ್ತದೆ.
Super thrilled to share the launch of my recent film – today at @AgaKhanMuseum as part of its “Rhythms of Canada”
Link: https://t.co/RAQimMt7LnI made this performance doc as a cohort of https://t.co/D5ywx1Y7Wu@YorkuAMPD @TorontoMet @YorkUFGS
Feeling pumped with my CREW❤️ pic.twitter.com/L8LDDnctC9
— Leena Manimekalai (@LeenaManimekali) July 2, 2022
ನಿರ್ದೇಶಕಿ ಹಿಂದೂ ದೇವತೆಯನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸೋಮವಾರ, ದೆಹಲಿ ಮೂಲದ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್‌ಎಸ್‌ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ ವಕೀಲರು, ನಿರ್ದೇಶಕರು ಕಾಳಿ ದೇವಿಯು ಧೂಮಪಾನ ಮಾಡುವುವನ್ನು ತೋರಿಸುವ ಮೂಲಕ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದು ಹೆಚ್ಚು ಆಕ್ಷೇಪಾರ್ಹ ಮತ್ತು ಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ನಿರ್ದೇಶಕಿಯ ಪೋಸ್ಟರ್ ಅನ್ನು ಖೇದನೀಯ ಎಂದು ಕರೆದ ಅವರು, ಚಲನಚಿತ್ರವನ್ನು ಪ್ರಚಾರ ಮಾಡಲು ಅದನ್ನುಇಂತಹ ದೃಶ್ಯ ಬಳಸುವುದು ಅತ್ಯಂತ ಅತಿರೇಕವಾದುದು. ಇದು ಹಿಂದೂ ಸಮುದಾಯದ ಭಾವನೆಗಳು ಮತ್ತು ನಂಬಿಕೆಗಳಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ಸೈಬರ್ ಸೆಲ್‌ಗೆ ನೀಡಿದ ದೂರಿನಲ್ಲಿ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ನಿರ್ದೇಶಕಿಯು ತನ್ನ ಟ್ವಿಟರ್ ಖಾತೆಯಿಂದ ಆಕ್ಷೇಪಾರ್ಹ ಫೋಟೋ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿದ್ದು, ಇದು ಸಾಮಾಜಿಕ ಮಾಧ್ಯಮ ಮತ್ತು ಎಲ್ಲಾ ಸಾರ್ವಜನಿಕ ವೇದಿಕೆಗಳಲ್ಲಿ ಚೆನ್ನಾಗಿ ಪ್ರಸಾರವಾಗಿದೆ. ಇದು ಕಲಂ 295A,298, 505, 67 I.T Act ಮತ್ತು 34 ಐಪಿಸಿ ಅಡಿಯಲ್ಲಿ ಅಪರಾಧವಾಗಿದೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ.
ಶನಿವಾರದಂದು ಲೀನಾ ಮಣಿಮೇಕಲೈ ಟ್ವಿಟರ್‌ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಕೆನಡಾದಲ್ಲಿ ತಮ್ಮ ಚಿತ್ರವನ್ನು ಪ್ರಾರಂಭಿಸಿ ಅವರ ಟ್ವಿಟ್ಟರ್ ಪೋಸ್ಟ್‌ನಲ್ಲಿನ ಶೀರ್ಷಿಕೆಯು, ಇಂದು ಅಗಖಾನ್ ಮ್ಯೂಸಿಯಂನಲ್ಲಿ ಅದರ “ರಿದಮ್ಸ್ ಆಫ್ ಕೆನಡಾ” ಭಾಗವಾಗಿ ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಹಂಚಿಕೊಳ್ಳಲು ಹೆಚ್ಚು ಉತ್ಸುಹಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ತಮಿಳು ಸುದ್ದಿ ಪೋರ್ಟಲ್ ಪ್ರಕಾರ, ಮಣಿಮೇಕಲೈ ಸಾಕ್ಷ್ಯಚಿತ್ರವು ಒಂದು ಸಂಜೆ ಕಾಳಿ ದೇವಿಯು ಕಾಣಿಸಿಕೊಂಡಾಗ ಮತ್ತು ಟೊರೊಂಟೊದ ಬೀದಿಗಳಲ್ಲಿ ಓಡಾಡಿದಾಗ ನಡೆಯುವ ಘಟನೆಗಳ ಸುತ್ತ ಇರುತ್ತದೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಕೀಲರು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಪೋಸ್ಟರ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ನಿರ್ದಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗಳನ್ನು ‘ಕ್ರೋಧ’ಗೊಳಿಸುವ ‘ಮಾನಹಾನಿಕಾರಕ’ ಕೃತ್ಯ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.