National
ಗೋವಾ: ಅನಮೋಡ ಘಾಟ್ ರಸ್ತೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ; ಹಲವು ಗಂಟೆ ಟ್ರಾಫಿಕ್ ಜಾಮ್

ಪಣಜಿ: ಗೋವಾ ರಾಜ್ಯಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ಗೋವಾ-ಬೆಳಗಾವಿ ಜೋಡಿಸುವ ಅನಮೋಡ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಈ ಮಾರ್ಗದಲ್ಲಿ ಗುಡ್ಡ ಕುಸಿತದಿಂದ ಗೋವಾದಿಂದ ಬೆಳಗಾವಿ ಮಾರ್ಗಕ್ಕೆ ತೆರಳುವವರು ತೊಂದರೆ ಅನುಭವಿಸುವಂತಾಯಿತು.
ಹಲವು ಗಂಟೆಗಳ ಕಾಲ ತೆರವು ಕಾರ್ಯಾಚರಣೆಯ ನಂತರ ವಾಹನ ಸಂಚಾರ ಪುನರಾರಂಭಗೊಂಡಿತು.
ಇದಲ್ಲದೆ ಪಣಜಿಯ ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡಿದರು. ಮಡಗಾಂವ್-ಪಣಜಿ ಮಾರ್ಗ ದಿನವಿಡೀ ಟ್ರಾಫಿಕ್‍ಜಾಮ್ ಉಂಟಾಯಿತು.