ಹೋಟೆಲ್, ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಸರ್ವೀಸ್ ಚಾರ್ಜ್ ಸಂಗ್ರಹಿಸುವಂತಿಲ್ಲ; ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಆದೇಶ

ನವದೆಹಲಿ: ಹೋಟೆಲ್ ( Hotel ), ರೆಸ್ಟೋರೆಂಟ್‌ಗಳು ( Restaurants ) ಗ್ರಾಹಕರಿಂದ ( Customer ) ಸರ್ವೀಸ್ ಚಾರ್ಜ್ ( Service Charge ) ಸಂಗ್ರಹಿಸುವಂತಿಲ್ಲ ಹಾಗೂ ಗ್ರಾಹಕರಿಗೆ ಸರ್ವೀಸ್ ಚಾರ್ಜ್ ನೀಡುವಂತೆ ಬಲವಂತ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಇಂದು (ಜುಲೈ 4) ಆದೇಶ ಹೊರಡಿಸಿದೆ.
ಹೋಟೆಲ್ , ರೆಸ್ಟೋರೆಂಟ್ ಸರ್ವೀಸ್ ಚಾರ್ಜ್ ವಿಧಿಸಿದರೇ, ರಾಷ್ಟ್ರೀಯ ಗ್ರಾಹಕರ ಹೆಲ್ಪ್ಲೈನ್ಗೆ 1915ಗೆ ದೂರು ನೀಡಬಹುದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.
ಹೋಟೆಲ್, ರೆಸ್ಟೋರೆಂಟ್‌ಗಳು ಈಗಾಗಲೇ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದ್ದು, ಈ ಮಧ್ಯೆ ಸೇವಾ ಶುಲ್ಕ ಗ್ರಾಹಕರಿಕೆ ಹೊರೆಯಾಗುತ್ತದೆ. ಹೀಗಾಗಿ ಸೇವಾ ಶುಲ್ಕ ವಿಧಿಸುವುದು ಅನ್ಯಾಯದ ವ್ಯಾಪಾರವೆಂದು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು CCPA ಈ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಾರ್ಗಸೂಚಿಗಳ ಪ್ರಕಾರ, “ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಸರ್ವೀಸ್ ಚಾರ್ಜ್ ಸಂಗ್ರಹಿಸುವಂತಿಲ್ಲ ಹಾಗೂ ಗ್ರಾಹಕರಿಗೆ ಸರ್ವೀಸ್ ಚಾರ್ಜ್ ನೀಡುವಂತೆ ಬಲವಂತ ಮಾಡುವಂತಿಲ್ಲ ಅಥವಾ ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.
ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ಪಾವತಿಸಲು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಸೇವಾ ಶುಲ್ಕ ಪಾವತಿಸುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು. ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಸೇವೆಗಳಲ್ಲಿ ಕೊರತೆ ಉಂಟು ಮಾಡುವಂತಿಲ್ಲ ಎಂದು ತಿಳಿಸಿದೆ.