InternationalKarnataka NewsLatestNational
Trending
1 ಮಿಲಿಯನ್ ಹಜ್ ಯಾತ್ರಿಗಳ ಸ್ವಾಗತಕ್ಕೆ ಸೌದಿ ಅರೇಬಿಯಾ ಸಜ್ಜು

ರಿಯಾದ್, ಜು.4: ಕೊರೋನ ಸಾಂಕ್ರಾಮಿಕದ ಬಳಿಕದ ಅತೀ ದೊಡ್ಡ ಹಜ್ ಯಾತ್ರೆ ಎಂಬ ಹಿರಿಮೆಗೆ ಪಾತ್ರವಾಗಿರುವ ಈ ವರ್ಷದ ಹಜ್ ಯಾತ್ರೆಯಲ್ಲಿ ಸುಮಾರು 1 ಮಿಲಿಯನ್ ಯಾತ್ರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಅವರನ್ನು ಸ್ವಾಗತಿಸಲು ಸೌದಿ ಅರೆಬಿಯಾ ಸರ್ವ ಸಿದ್ಧತೆ ನಡೆಸಿದೆ.
ಈಗಾಗಲೇ ವಿದೇಶದ ಸುಮಾರು 6,50,000 ಯಾತ್ರಿಗಳು ಸೌದಿಗೆ ಆಗಮಿಸಿದ್ದಾರೆ.
ಮಕ್ಕಾ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಬೃಹತ್ ಬ್ಯಾನರ್ಗಳು ಹಜ್ ಯಾತ್ರಿಗಳನ್ನು ಸ್ವಾಗತಿಸುತ್ತಿವೆ. ನಗರದಲ್ಲೆಡೆ ಸಶಸ್ತ್ರ ಭದ್ರತಾ ಪಡೆಗಳು ಗಸ್ತು ತಿರುಗುತ್ತಿವೆ. ಈ ವರ್ಷದ ಹಜ್ ಯಾತ್ರೆಯಲ್ಲಿ ವಿದೇಶದ 8,50,000 ಯಾತ್ರಿಗಳ ಸಹಿತ 1 ಮಿಲಿಯನ್ ಯಾತ್ರಿಗಳಿಗೆ ಅವಕಾಶ ನೀಡಲಾಗಿದ್ದು ಇವರಲ್ಲಿ ಕನಿಷ್ಟ 6,50,000 ವಿದೇಶಿ ಯಾತ್ರಿಗಳು ಈಗಾಗಲೇ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.