Karnataka News
ಭೀಕರ ಅಪಘಾತ : ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ತಂದೆ-ಮಗಳ ದುರ್ಮರಣ

ಕುಷ್ಟಗಿ : ಕೊಪ್ಪಳ ಜಿಲ್ಲೆ ಹೊರವಲಯದ ಟೋಲ್ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಷ್ಟಗಿ ಹೊರವಲಯದ ಟೋಲ್ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 29 ವರ್ಷದ ತಂದೆ ಬಸಯ್ಯ ಹಿರೇಮಠ ಸೇರಿ 5 ವರ್ಷದ ಮಗಳು ಅಕ್ಷತಾ ಅಸುನೀಗಿದ್ದಾಳೆ.
ಇನ್ನು ಮೃತ ಬಸಯ್ಯ ಹಿರೇಮಠ ಹೆಂಡತಿ ಶಾಂತಮ್ಮ ಹಾಗೂ ಮಗನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.