
ನವದೆಹಲಿ: ಮೊಬೈಲ್ ಟವರ್ ಇನ್ಸ್ಟಾಲೇಷನ್ ಹೆಸರಿನಲ್ಲಿ ದೊಡ್ಡದೊಂದು ಹಗರಣವೇ ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ದೂರಸಂಪರ್ಕ ಸಚಿವಾಲಯ ಎಚ್ಚರಿಸಿದೆ.
ಈ ಬಗ್ಗೆ ಇಲಾಖೆಯ ಅಧಿಕೃತ ಸಂಸ್ಥೆಗಳಾಗಿರುವ ಡಿಐಪಿಎ(ಡಿಜಿಟಲ್ ಇನಾ#ಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್) ಮತ್ತು ಸಿಒಎಐ(ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಎಚ್ಚರಿಕೆ ನೀಡಿದೆ.
ಮೋಸಗಾರರು ನಿಮ್ಮ ಬಳಿ ಬಂದು ನಿಮ್ಮ ಜಾಗದಲ್ಲಿ ಟವರ್ ನಿರ್ಮಿಸುವುದಾಗಿ ಹೇಳುತ್ತಾರೆ. ಸರ್ಕಾರಕ್ಕೆ ಜಾಗವನ್ನು ಲೀಸ್ಗೆ ಕೊಡಲು ಒಂದಿಷ್ಟು ತೆರಿಗೆಯನ್ನು ನೀವು ಕಟ್ಟಬೇಕೆಂದು ಹೇಳಿ ಹಣ ಕಟ್ಟಿಸಿಕೊಳ್ಳುತ್ತಾರೆ. ಅದಕ್ಕೆ ನಕಲಿ “ನಿರಾಕ್ಷೇಪಣಾ ಪ್ರಮಾಣಪತ್ರ’ವನ್ನೂ ಕೊಡುತ್ತಾರೆ ಎಂದು ತಿಳಿಸಲಾಗಿದೆ.
ಕೇವಲ ಟೆಲಿಕಾಂ ಸರ್ವೀಸ್ ಪ್ರೊವೈಡರ್ಸ್(ಟಿಎಸ್ಪಿ) ಮತ್ತು ಇನಾ#ಸ್ಟ್ರಕ್ಚರ್ ಪ್ರೊವೈಡರ್ಸ್(ಐಪಿ)ಗಳು ಮಾತ್ರವೇ ಟವರ್ ನಿರ್ಮಿಸುವ ಅಧಿಕಾರ ಹೊಂದಿರುತ್ತಾರೆ. ಹಾಗಾಗಿ ಸಾರ್ವಜನಿಕರು ಈ ವಿಚಾರದಲ್ಲಿ ಹಣ ಪಾವತಿಗೂ ಮೊದಲು ದೃಢೀಕರಣ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.