ಹೆಣ್ಣಿನ ಕೈವಾಡದಿಂದ ತಪ್ಪಿತು ಎಂಎಲ್ಲಿ ಸ್ಥಾನ ಸಿದ್ದು, ಡಿಕೆಶಿ ಸಿಎಂ ಕುರ್ಚಿ ಆಸೆ ಬಿಟ್ಟರೆ ಕಾಂಗ್ರೆಸ್ಗೆ ಭವಿಷ್ಯ : ಎಂ.ಡಿ.ಲಕ್ಷ್ಮೀನಾರಾಯಣ್

ಒಂದು ಹೆಣ್ಣಿನ ಕೈವಾಡದಿಂದಾಗಿ ತಮಗೆ ವಿಧಾನ ಪರಿಷತ್ ಸ್ಥಾನ ಕೈ ತಪ್ಪಿತು ಎ೦ದು ರಾಜ್ಯ ಕಾಂಗ್ರೆಸ್ನ ಹಿ೦ದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷಹಾಗೂ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ.
ತಾಲೂಕಿನ ಮುನಿಯೂರು ಗ್ರಾಮದಲ್ಲಿ ನಡೆದ ಅವರ ಅಭಿಮಾನಿಗಳ ಮತ್ತು ಬೆಂಬಲಿಗರ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಮಗೆ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಭರ ವಸೆ ನೀಡಿದ್ದರು. ಅಂತಿಮ ಕ್ಷಣದವರೆಗೂ ನನ್ನ ಹೆಸರೇ ಇತ್ತು.
ಆದರೆ ಕೊನೆ ಕ್ಷಣದಲ್ಲಿ ಒಂದು ಹೆಣ್ಣಿನ ಮಾತಿಗೆ ಮಣೆ ಹಾಕಿ ತನ್ನ ಹೆಸರನ್ನು ಕೈಬಿಡಲಾಯಿತು ಎಂದರು. ಸಿದ್ದರಾಮಯ್ಯ ನವರು ಒಂದು ಸಮುದಾಯದ ಜನರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡಿದರು. ಆರ್ಎಸ್ಎಸ್ನ್ನು ಜರಿದರು. ಇಂತಹ ಮನಸ್ಥಿತಿ ಇರುವ ಕಾಂಗ್ರೆಸ್ ಮುಖಂಡರೊಂದಿಗೆ ಪಕ್ಷದಲ್ಲಿರಲು ತಮಗೆ ಇಷ್ಟವಿಲ್ಲ. ನಾನು ನೇರವಾಗಿ ಡಿ.ಕೆ.ಶಿವ ಕುಮಾರ್ ಮತ್ತು ಸಿದ್ದರಾಮಯ್ಯರ ನಡವಳಿಕೆಯನ್ನು ಖಂಡಿಸಿದ್ದೇನೆ. ಅವರಲ್ಲಿ ಮುಖ್ಯಮಂತ್ರಿ ಕುರ್ಚಿಯ ಆಸೆ ಹೆಚ್ಚಾಗಿದೆ. ಈರ್ವರ ಕಿತ್ತಾಟದಿಂದಾಗಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಈರ್ವರೂ ಮುಖ್ಯಮಂತ್ರಿ ಕುರ್ಚಿಯ ಆಸೆ ತ್ಯಜಿಸಿ ಪಕ್ಷ ಸಂಘಟನೆ ಮಾಡಿದಲ್ಲಿ ಕಾಂಗ್ರೆಸ್ಗೆ ಭವಿಷ್ಯ ವಿದೆ. ಇಲ್ಲದಿದ್ದಲ್ಲಿ ಅವರ ಕಣ್ಣ ಮುಂದೆಯೇ ಪಕ್ಷ ಸರ್ವ ನಾಶವಾಗಲಿದೆ ಎಂದು ಅವರು ಹೇಳಿದರು.
ತುರುವೇಕೆರೆ ತಾಲೂಕು ಮುನಿಯೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿದರು,
ನಾನು ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ. ಸಲ್ಲಿಸಿದವನು, ಗಾಂಧಿ ತತ್ವದಲ್ಲಿ ನಂಬಿಕೆಯಿಟ್ಟು ಪಕ್ಷಕ್ಕೆ ದುಡಿದವನು, ನನ್ನಂತಹ ಮುಖಂಡನಿಗೆ ಮೋಸ, ಮಾಡಿದರು. ಹೀಗಾಗಿ ಪಕ್ಷದಲ್ಲಿ ಯಾರೂ ಇರಲು ಇಷ್ಟಪಡುವುದಿಲ್ಲ. ತಮ್ಮ ಸ್ವಕ್ಷೇತ್ರದ ಜನರ ಅಭಿಪ್ರಾಯ ಯಣ್ ಹೇಳಿದರು. ಸಂಗ್ರಹಿಸಿದ್ದೇನೆ. ಅವರು ನನ್ನ ಇಷ್ಟದ ಪ್ರಕಾರ ನಡೆದು ಕೊಳ್ಳುವುದಾಗಿ ಹೇಳಿದ್ದಾರೆ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ರಾಜ್ಯಾದಾದ್ಯಂತ ನಮ್ಮ ಸಂಘಟನೆಯ ಮುಖಂಡರ ಸಭೆ ಕರೆದು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇನೆ ಎಂದು ಲಕ್ಷ್ಮೀ ನಾರಾಯಣ್ ಹೇಳಿದರು.
ಪಕ್ಷದಲ್ಲಿರುವ ತಪ್ಪನ್ನು ತಿದ್ದುಕೊಳ್ಳಲು ಹೇಳಿದ್ದೇನೆ. ತಿದ್ದಿಕೊಂಡರೆ ಸರಿ, ಇಲ್ಲದಿದ್ದಲ್ಲಿ ನನಗೇನು ನಷ್ಟ ಇಲ್ಲ. ತಮ್ಮೊಂದಿಗೆ ಹಿರಿಯ ಮುಖಂಡರಾದ ಎಸ್.ಆರ್. ಪಾಟೀಲ್ ಸಹ ಬೇಸರ ಹೊಂದಿದ್ದಾರೆ. ಹಲವಾರು ಮಂದಿ ಕಾಂಗ್ರೆಸ್ ನಾಯಕರ ದುರ್ವತ್ರನೆ ಖಂಡಿಸಿ ಹೇಳಿದರು.
ಆದರೆ ನನಗೊಬ್ಬನಿಗೆ ಮಾತ್ರ ನೋಟಿಸ್ ನೀಡಿ ದ್ದಾರೆ. 6ರಂದು ಬಳ್ಳಾರಿಯಲ್ಲಿ ನೇಕಾರ ಸಮುದಾಯದ ಬೃಹತ್ ಸಮಾರಂಭ ನಡೆಯಲಿದೆ. ಅಂದು ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಎಂ.ಡಿ.ಲಕ್ಷ್ಮೀನಾರಾಯಣ್
ಕಾಂಗ್ರೆಸ್ ಮುಖಂಡರ ಬಗ್ಗೆ ಬಹಳ ಕಟುವಾಗಿ ಮಾತನಾಡುತ್ತಿರುವುದರಿಂದ ಪಕ್ಷ ತಮ್ಮನ್ನು ವಜಾ ಮಾಡಿದರೆ ಏನುಮಾಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀನಾರಾಯಣ್ ನನ್ನನ್ನು ಪಕ್ಷದಿಂದ ವಜಾ ಮಾಡಲಿ, ಆ ಮೇಲೆ ಗೊತ್ತಾಗುತ್ತೆ ನಾನೇನು, ನನ್ನ ಶಕ್ತಿ ಏನು ಎಂದು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಚಾಟಿ ಬೀಸಿದರು ಸಭೆಯಲ್ಲಿ ಹಲವಾರು ತಾಪಂ ಮಾಜಿ ಸದಸ್ಯರು, ಗ್ರಾಪಂಸದಸ್ಯರು, ಹಲವು ಸಂಘ ಸಂಸ್ಥೆಗಳ ಜನಪ್ರತಿನಿಧಿಗಳಿದ್ದು, ಇವರೆಲ್ಲರೂ ಲಕ್ಷ್ಮೀ ನಾರಾ ಯಣ್’ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.