Film Poster: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಸಿನಿಮಾ ಪೋಸ್ಟರ್, ಸ್ಪಷ್ಟನೆ ಕೊಟ್ಟ ನಿರ್ದೇಶಕಿ

ಆಕ್ರೋಶ ಹೊರ ಹಾಕಿದ ನೆಟ್ಟಿಗರು
ಆದರೆ ನೆಟಿಜನ್‌ಗಳನ್ನು ಕೆರಳಿಸಿರುವ ಈ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಹಿಂದೂ ದೇವತೆಯ ವೇಷವನ್ನು ಧರಿಸಿದ್ದಾರೆ. ಆ ಫೋಟೋದಲ್ಲಿ, ಆ ಮಹಿಳೆ ಸಿಗರೇಟು ಸೇದುತ್ತಿರುವುದನ್ನು ಕಾಣಬಹುದು. LGBT ಸಮುದಾಯದ ಹೆಮ್ಮೆಯ ಧ್ವಜವನ್ನು ಸಹ ನಾವು ಹಿಂದೆ ಕಾಣಬಹುದು. ಈ ಪೋಸ್ಟರ್ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಿಯ ಚಿತ್ರಣದ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಚಿತ್ರ ನಿರ್ಮಾಪಕರ ಬಗ್ಗೆ ಸೋಷಿಯಲ್ ಮೀಡಿಯಾ ಬಳಕೆದಾರರು ದೂರು ನೀಡಿದ್ದು, ಪೋಸ್ಟರ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ‘ಅರೆಸ್ಟ್ ಲೀನಾಮಣಿಮೇಕಲೈ’ ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ಕರಾವಳಿ ಸುಂದರಿಗೆ ಮಿಸ್ ಇಂಡಿಯಾ ಪಟ್ಟ, ಸಿನಿ ಶೆಟ್ಟಿಯ ಕಿರು ಪರಿಚಯ ಇಲ್ಲಿದೆ
ವಿವಾದ ಹಾಗ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ತನಗೆ ಬರುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆಯ ನಡುವೆ ದ್ವೇಷಕ್ಕಿಂತ ಪ್ರೀತಿ ಆಯ್ಕೆ ಮಾಡಲು ಜನರನ್ನು ಕೇಳಿಕೊಂಡಿದ್ದಾರೆ. ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಕೆನಡಾದ ವಿವಿಧ ಸಂಸ್ಕೃತಿಯ ಕುರಿತು ಚಲನಚಿತ್ರಗಳನ್ನು ನಿರ್ಮಿಸುವ ಶಿಬಿರದಲ್ಲಿ ಭಾಗವಹಿಸಲು ಕೆನಡಾದಾದ್ಯಂತದ ಕೆಲವು ಅತ್ಯುತ್ತಮ ಸಿನಿಮಾ ವಿದ್ಯಾರ್ಥಿಗಳನ್ನು ಆಹ್ವಾನಿಸಿತ್ತು. ಆ ಶಿಬಿರದಲ್ಲಿ ನಾನು ಭಾಗವಹಿಸಿ ಕೊಡುಗೆ ನೀಡಿದ ಚಿತ್ರವೇ ಈ ಕಲಿ. ಇದರಲ್ಲಿ ನಾನು ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ ಮತ್ತು ನಿರ್ಮಿಸಿದ್ದೇನೆ, ಎಂದು ಅವರು ಹೇಳಿದ್ದಾರೆ.
ಸ್ಪಷ್ಟನೆ ಕೊಟ್ಟ ನಿರ್ದೇಶಕಿ
ಈ ಚಿತ್ರವು ಒಂದು ಸಂಜೆ ಕಾಳಿ ಕಾಣಿಸಿಕೊಂಡಾಗ ಮತ್ತು ಟೊರೊಂಟೊದ ಬೀದಿಗಳಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ. ನೀವು ಚಿತ್ರವನ್ನು ನೋಡಿದರೆ, ಲೀನಾ ಮಣಿಮೇಕಲೈಯನ್ನು ಬಂಧಿಸಿ ಎಂಬ ಹ್ಯಾಶ್‌ಟ್ಯಾಗ್ ಅನ್ನು ಪೋಸ್ಟ್ ಮಾಡುವುದಿಲ್ಲ, ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಶ್‌ಟ್ಯಾಗ್ ಅನ್ನು ಪೋಸ್ಟ್ ಮಾಡುತ್ತೀರಿ ಎಂದಿದ್ದಾರೆ. ಅಲ್ಲದೇ, ಹಲವಾರು ಜನಾಂಗೀಯ ಭಿನ್ನಾಭಿಪ್ರಾಯಗಳ ನಡುವೆ ದ್ವೇಷದ ಬದಲು ಪ್ರೀತಿಯನ್ನು ಆರಿಸಿಕೊಳ್ಳುವ ಬಗ್ಗೆ ಈ ಕಾಳಿ ಮಾತನಾಡುತ್ತಾಳೆ” ಎಂದು ಲೀನಾ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ನಟಿ ಹರ್ಷಿಕಾ ಪೂಣಚ್ಚ, ಭುವನ್
ಇನ್ನು ಈ ವಿವಾದಾತ್ಮಕ ಪೋಸ್ಟರ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ಇದು ಉದ್ದೇಶಪೂರ್ವಕವಾಗಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ವಾಕ್ ಸ್ವಾತಂತ್ರ್ಯ ಎಂದರೆ, ಒಬ್ಬರು ಗೆರೆ ದಾಟಬಹುದು ಮತ್ತು ಸೃಜನಶೀಲತೆಯ ವೇಷದಲ್ಲಿ ಏನನ್ನಾದರೂ ತೋರಿಸಬಹುದು ಎಂದಲ್ಲ. ಇದನ್ನುಹೀಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಬಹುದೇ? ದಯವಿಟ್ಟು ಗಮನಿಸಿ ಎಂದು ಬರೆದುಕೊಂಡಿದ್ದಾರೆ.