BREAKING NEWS: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಆಪ್ತ ಮಹಾಂತೇಶ್, ಮಂಜುನಾಥ್ ಅರೆಸ್ಟ್

ಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿಯ ಖಾಸಗಿ ಹೋಟೆಲ್ ಬಳಿಯಲ್ಲಿ ಚೂರಿಯಿಂದ ಇರಿದು, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು ಹತ್ಯೆಗೈದಿದ್ದಂತ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಕೊಲೆ ಗೈದಿದ್ದು ಚಂದ್ರಶೇಖರ್ ಗುರೂಜಿ ಆಪ್ತ ಮಹಾಂತೇಶ್ ಹಾಗೂ ಮಂಜುನಾಥ್ ಎಂಬುವಂತವರಾಗಿದ್ದಾರೆ.
ಹುಬ್ಬಳ್ಳಿಯ ಜನತೆಯೇ ಬೆಚ್ಚಿ ಬೀಳುವಂತೆ ಹಾಡ ಹಗಲೇ ಖಾಸಗಿ ಹೋಟೆಲ್ ಬಳಿಯಲ್ಲಿ ಕುಳಿತಿದ್ದಂತ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು, ಕಾಲಿಗೆ ಬಿದ್ದು ನಮಸ್ಕರಿಸೋ ನೆಪದಲ್ಲಿ ಇಬ್ಬರು ಚಾಕುವಿನಿಂದ ಇರಿದು ಇಂದು ಹತ್ಯೆಗೈದಿದ್ದರು. ಈ ಸಂಬಂಧ ಐವರು ಪೊಲೀಸರ ತಂಡವನ್ನು ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿತ್ತು.
ಇದೀಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿಯಲ್ಲಿ, ಚಂದ್ರಶೇಖರ್ ಗುರೂಜಿ ಹತ್ಯೆಗೈದಿದ್ದಂತ ಇಬ್ಬರು ಹಂತಕರನ್ನು ಹುಬ್ಬಳ್ಳಿ, ರಾಮದುರ್ಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಚಂದ್ರಶೇಖರ್ ಗುರೂಜಿ ಆಪ್ತ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ್ ದುಮ್ಮವಾಡ ಎಂಬುದಾಗಿ ಗುರುತಿಸಲಾಗಿದೆ.