National
ಗೋವಾ : ರೈಲ್ವೆ ಹಳಿ ಮೇಲೆ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತ

ಪಣಜಿ: ಗೋವಾ ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಗೆ ಗೋವಾದ ಸಾವರ್ಡೆ ಬಳಿ ರೈಲು ಹಳಿ ಮೇಲೆ ಬೃಹತ್ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದೆ.
ಸೋಮವಾರ ರಾತ್ರಿ ಸಾವರ್ಡೆ ಬಳಿ ರೈಲ್ವೆ ಹಳಿ ಮೇಲೆ ಮರ ಬಿದ್ದು ಈ ಮಾರ್ಗದ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದೆ. ನಂತರ ರೈಲ್ವೆ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ.
ಈ ಘಟನೆಯಿಂದ ವಾಸ್ಕೊ-ಕುಳೆ ರೈಲು ಸಂಚಾರದಲ್ಲಿ ಹಲವು ಗಂಟೆಗಳ ಕಾಲ ವ್ಯತ್ಯಯವುಂಟಾಗಿತ್ತು.