ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಜಾಮೀನಿಗಾಗಿ ಕಾದು ಕುಳಿತ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್

ನ್ಯಾಯಾಲಯದ ಆದೇಶದನ್ವಯ ಅಧಿಕಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರಾತ್ರಿ ಒಪ್ಪಿಸಲಾಗಿದೆ . ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕ್ವಾರಂಟೈನ್ ಸೆಲ್ ನಲ್ಲಿ ಕಾಲ ಕಳೆದ ಮಂಜುನಾಥ್ ತಡರಾತ್ರಿವರೆಗು ನಿದ್ರಿಸಿರಲಿಲ್ಲ.
ಹೆಚ್ಚು ಮಾತನಾಡದ ಮಂಜುನಾಥ್
ಸಾಮಾನ್ಯವಾಗಿ ವಿಚಾರಣಾಧೀನ ಖೈದಿಗಳಿಗೆ ನೀಡಲಾಗುವ ಚಾಪೆ ಮತ್ತು ಬೆಡ್ ಶೀಟ್ ಹೊದ್ದು ನಿದ್ರಿಸಿದ ಮಂಜುನಾಥ್ ಮುಂಜಾನೆ ಆರು ಗಂಟೆ ಸುಮಾರಿಗೆ ನಿತ್ಯ ಕರ್ಮ ಮುಗಿಸಿದ್ದಾರೆ. ಎಂದಿನಂತೆ ಇತರೆ ಖೈದಿಗಳಿಗೆ ನೀಡುವ ಚಿತ್ರಾನ್ನ ಸವಿದ ಮಂಜುನಾಥ್ ಸಿಬ್ಬಂದಿ ಜೊತೆ ಹೆಚ್ಚು ಮಾತನಾಡಲಿಲ್ಲ ಎನ್ನಲಾಗಿದೆ.
5 ಲಕ್ಷ ಸ್ವೀಕರಿಸುತ್ತಿದ್ದ ಆರೋಪ
ಇನ್ನೂ ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿನ ವ್ಯಾಜ್ಯದಲ್ಲಿ ಆಜಂ ಪಾಶಾ ಎಂಬುವವರ ಪರವಾಗಿ ಆದೇಶ ನೀಡಲು 5 ಲಕ್ಷ ರೂಪಾಯಿ ಲಂಚ ಪಡೆದ ಗಂಭೀರ ಆರೋಪ ಮಂಜುನಾಥ್ ಮೇಲಿದ್ದು, ಮೇ 21ರಂದು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು 5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್ನನ್ನು ಬಂಧಿಸಿದ್ದರು.
ಬಂಧಿತರ ವಿಚಾರಣೆಯಲ್ಲಿ ಆಗ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಪಾತ್ರ ಕಂಡುಬಂದ ಕಾರಣ ಬಂಧಿಸಲಾಗಿದೆ. ತಡರಾತ್ರಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಆರೋಪಿಯನ್ನು ಎಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದು , ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.
ವಿಚಾರಣಾಧಿನ ಖೈದಿ ನಂಬರ್ 6773
ಜೈಲಿನ ದಾಖಲಾತಿ ವಿದಿವಿದಾನಗಳನ್ನು ಪೂರೈಸುವುದು ತಡವಾದ ಹಿನ್ನೆಲೆ ಮಾರನೇ ದಿನ ಬೆಳಗ್ಗೆ ವಿಚಾರಣಾಧಿನ ಖೈದಿ ನಂಬರ್ 6773 ನೀಡಿದ್ದು , ಸದ್ಯ ಕ್ವಾರಂಟೈನ್ ಕೊಠಡಿಯಲ್ಲಿ ಸಾಮಾನ್ಯ ವಿಚಾರಣಾದೀನ ಖೈದಿಯಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.
ಕೇಂದ್ರ ಕಾರಾಗೃಹ ಬೆಂಗಳೂರು
ಜಾಮೀನಿಗಾಗಿ ಕಾದು ಕುಳಿತ ಮಂಜುನಾಥ್
ಒಟ್ನಲ್ಲಿ ಈ ಹಿಂದೆ ಸಹ ಭ್ರಷ್ಟಚಾರ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಜೈಲು ಸೇರಿದ ಇತಿಹಾಸವಿದ್ದು , ಇದೀಗ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಸಹ ಸೇರ್ಪಡೆಯಾಗಿದ್ದಾರೆ , ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಜಿಲ್ಲಾಧಿಕಾರಿ ಸಾಮಾನ್ಯ ವಿಚಾರಣಾಧೀನ ಖೈದಿಯಂತೆ ದಿನ ದೂಡುತ್ತಿದ್ದು, ಜಾಮೀನಿಗಾಗಿ ಕಾದು ಕುಳಿತ್ತಿದ್ದಾರೆ.
5 ಲಕ್ಷ ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಜಿಲ್ಲಾಧಿಕಾರಿ
ಕಳೆದ ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ ಮಹೇಶ್ ಎಂಬುವರು ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆದು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿ ಬಂದಿತ್ತು.
ಕೇಂದ್ರ ಕಾರಾಗೃಹ ಬೆಂಗಳೂರು
ಹೀಗಾಗಿ ಎಸಿಬಿ ತನಿಖಾಧಿಕಾರಿಗಳು ಡಿಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರವಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್, ಭೂ ವ್ಯಾಜ್ಯ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿ ಸೇರಿಸುವಂತೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಪಾತ್ರದ ಬಗ್ಗೆ ಸರಿಯಾಗಿ ತನಿಖೆ ನಡೆಸಿದ ಎಸಿಬಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.