ಪತ್ರಕರ್ತರು ಸತ್ಯವನ್ನು ಹೇಳಲು ಎಂದು ಹಿಂಜರಿಯಬಾರದು, ತಮ್ಮ ವರದಿ ಸತ್ಯದಿಂದ ಕೂಡಿರಬೇಕು. ತಜ್ಞ ಡಾ.ಗುರುರಾಜ ಕರ್ಜಗಿ
ಪತ್ರಿಕಾ ದಿನಾಚರಣೆ ಹಾಗೂ ಗುರು ವಂದನಾ ಕಾರ್ಯಕ್ರಮ

ಪತ್ರಕರ್ತರು ಸತ್ಯವನ್ನು ಹೇಳಲು ಎಂದು ಹಿಂಜರಿಯಬಾರದು, ತಮ್ಮ ವರದಿ ಸತ್ಯದಿಂದ ಕೂಡಿರಬೇಕು. ಯಾವುದೇ ವ್ಯಕ್ತಿಗತವಾದ ಕೋಪ-ತಾಪ ವನ್ನು ತಮ್ಮ ಬರಹದಲ್ಲಿ ತೋರದೆ ವಸ್ತುನಿಷ್ಠವಾದ ವರದಿಯನ್ನು ನೀಡಬೇಕು ಎಂದು ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರು ಪತ್ರಕರ್ತರಿಗೆ ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎಲ್.ಇ ಸಭಾಂಗಣಸಲ್ಲಿ ಮಂಗಳವಾರ(ಜುಲೈ 5) ನಡೆದ ಪತ್ರಿಕಾ ದಿನಾಚರಣೆ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಸಾಮಾನ್ಯ ಪತ್ರಕರ್ತರು ವರದಿ ಮಾಡುವಾಗ ಮೊದಲು ಏನು ಬರೆಯುತ್ತಿದ್ದೇನೆ ಎಂಬುವುದನ್ನು ತಿಳಿದುಕೊಳ್ಳಬೇಕು. ನಾನು ಬರೆಯುವ ವರದಿಯಲ್ಲಿ ಸತ್ಯ ಇದೆಯೇ, ಯಾವ ವಿಷಯ ಹೇಳಬೇಕು, ನಾನು ಹೇಳುವ ವಿಷಯ ಅವಶ್ಯಕತೆ ಇದೆಯಾ ಎಂಬುವುದನ್ನು ಅರಿತು ಬರೆಯಬೇಕು ಎಂದು ಪತ್ರಕರ್ತರಿಗೆ ಹೇಳಿದರು.
ನಾವು ಒಳ್ಳೆಯ ಸುದ್ದಿಯ ಕಡೆ ಗಮನ ನೀಡಬೇಕು. ಪತ್ರಕರ್ತರು ಡಿ.ವಿ.ಗುಂಡಪ್ಪ ಅವರನ್ನು ಮಾದರಿಯಾಗಿಟ್ಟುಕೊಂಡು ಅವರ ಹಾಗೇ ಪತ್ರಕರ್ತರು ಆಗಬೇಕು ಎಂದು ಕಿವಿಮಾತು ಹೇಳಿದರು.
ಪತ್ರಿಕಾ ದಿನಾಚರಣೆ ಹಾಗೂ ಗುರು ವಂದನೆ ಎರಡು ಸಮಾರಂಭವನ್ನು ಒಂದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿ. ಶಿಕ್ಷಕರು ಜ್ಞಾನವನ್ನು ಪ್ರಸಾರ ಮಾಡಿದರೆ, ಪತ್ರಕರ್ತರು ಸುದ್ದಿಯನ್ನು ಪ್ರಸಾರ ಮಾಡುತ್ತಾರೆ. ಶಿಕ್ಷಕರಿಗೆ ಗೌರವ ಸಿಗುವುದು ಒಳ್ಳೆಯ ಶಿಕ್ಷಣವನ್ನು ನೀಡಿದಾಗ, ಪತ್ರಕರ್ತರಿಗೆ ಗೌರವ ಸೀಗುವುದು ವಸ್ತುನಿಷ್ಠ ಸುದ್ದಿಯಿಂದ ಎಂದು ಹೇಳಿದರು.ಶಿಕ್ಷಕರು ಮತ್ತು ಪತ್ರಕರ್ತರು ಜಗತ್ತಿಗೆ ಮುಂದಿನ ಮಕ್ಕಳಿಗೆ ಏನನ್ನು ತಿಳಿಸುತ್ತಿದ್ದೆನೆ, ಆ ವಿಚಾರ ಮಕ್ಕಳ ಮೇಲೆ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುವುದನ್ನು ಅರಿತು ಶಿಕ್ಷಣ ನೀಡಬೇಕು. ಇಂತಹ ಶಿಕ್ಷಕರಿಗೆ ಮತ್ತು ಪತ್ರಕರ್ತರಿಗೆ ಮಾತ್ರ ಒಳ್ಳೆಯ ಗೌರವ ಸೀಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ರಾಜ್ಯ ಪತ್ರಿಕಾರಂಗಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಸ್ವಾಂತಂತ್ರ್ಯ ಒದಗಿಸುವಲ್ಲಿ ಪತ್ರಿಕಾ ರಂಗ ಪ್ರಮುಖ ಪಾತ್ರ ವಹಿಸಿದೆ ಎಂದರು.
ಸಂವಿಧಾನದ 4 ನೇ ಅಂಗವಾಗಿ ಪತ್ರಿಕಾ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಶಾಸಕಾಂಗ, ಕಾರ್ಯಾಂಗಗಳನ್ನು ಎಚ್ಚರಿಸುವ ಹಾಗೂ ತಿದ್ದುವ ಕೆಲಸ ನಾಲ್ಕನೇ ಆಂಗ ಮಾಡುತ್ತಿದೆ.
ಭಾರತ ದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶವಾಗಿದೆ. ಇತರೆ ದೇಶಕ್ಕೆ ಹೋಲಿಸಿದರೆ ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯದ ನೀಡಿದ ಮುಂಚೂಣಿಯ ದೇಶವಾಗಿದೆ.
ನಮ್ಮ ಜೀವನ ಬದಲಾವಣೆಯಲ್ಲಿ ನಮ್ಮ ಗುರುಗಳ ಪಾತ್ರ ಮಹತ್ವದಾಗಿದೆ. ಎಲ್ಲರೂ ಗುರುಗಳ ಸೇವೆ ಮರೆಯಬಾರದು ಎಂದು ತಿಳಿಸಿದರು.
ಲಕ್ಷ್ಮೀ ಎಜ್ಯುಕೇಶನ ಟ್ರಸ್ಟ್ ನ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಪತ್ರಕರ್ತರು ಸಮಾಜದ ಮೂರನೇ ಕಣ್ಣು, ಎರಡು ಕಣ್ಣ ನೋಡದೇ ಇರುವುದನ್ನು ಪತ್ರಕರ್ತರು ನೋಡುತ್ತಾರೆ.
ಸಮಾಜದಲ್ಲಿ ಯಾರೇ ಬಂದರು ನ್ಯಾಯ ಕೊಡಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ಹೇಳಿದರು
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದ ಅಧ್ಯಕ್ಷರಾದ ದೀಲಿಪ್ ಕುರಂದವಾಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪೊಲೀಸ್ ಕಮೀಷನರ್ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಭೀ. ಬಾಳೋಜಿ ಹಾಗೂ ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.