
ಅಮೃತ್ ಸರ: ಪಂಜಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ್ ಮಾನ್ ಅವರು ಎರಡನೇ ವಿವಾಹವಾಗಲು ಎಲ್ಲಾ ರೀತಿಯ ಸಿದ್ಧತೆ ನಡೆದಿರುವುದಾಗಿ ವರದಿ ತಿಳಿಸಿದೆ. ಗುರುವಾರ ಮಾನ್ ವಿವಾಹ ನಡೆಯಲಿದೆ.
ಆರು ವರ್ಷಗಳ ಹಿಂದೆ ಮಾನ್ ವಿಚ್ಛೇದನ ಪಡೆದಿದ್ದರು. ಮಾನ್ ಮೊದಲ ಪತ್ನಿ ಮತ್ತು ಮಕ್ಕಳು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಇಬ್ಬರು ಮಕ್ಕಳು ಆಗಮಿಸಿದ್ದರು.
ವರದಿಯ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೇ ವಿವಾಹವಾಗಬೇಕೆಂಬುದು ಅವರ ತಾಯಿ ಹರ್ಪಾಲ್ ಕೌರ್ ಆಸೆಯಾಗಿದೆ. ತಾಯಿ ಹರ್ಪಾಲ್ ಮತ್ತು ಸಹೋದರಿ ಆಯ್ಕೆ ಮಾಡಿರುವ ಡಾ. ಗುರ್ ಪ್ರೀತ್ ಕೌರ್ ಅವರನ್ನು ಸಿಎಂ ವಿವಾಹವಾಗಲಿದ್ದಾರೆ.
ಆಪ್ತರಿಗೆ ಮಾತ್ರ ಆಹ್ವಾನ:
ಭಗವಂತ್ ಮಾನ್ ಅವರ ವಿವಾಹ ಸಮಾರಂಭ ಖಾಸಗಿಯಾಗಿ ನೆರವೇರಲಿದ್ದು, ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಮಾನ್ ಸರಳ ವಿವಾಹ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ವಧು, ವರರನ್ನು ಆಶೀರ್ವದಿಸಲಿದ್ದಾರೆ ಎಂದು ವರದಿ ತಿಳಿಸಿದೆ.