Karnataka News
ಚಂದ್ರಶೇಖರ ಗುರೂಜಿ ಮೃತದೇಹ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ

ಹುಬ್ಬಳ್ಳಿ: ಗುರೂಜಿ ಶವ ಪರೀಕ್ಷೆ ಮುಕ್ತಾಯಗೊಂಡಿದ್ದು, ಮೃತದೇಹವನ್ನು ಕಿಮ್ಸ್ ಶವಾಗಾರದಿಂದ ಸ್ವಗ್ರಾಮಕ್ಕೆ ತರಲಾಗುತ್ತಿದೆ.
ಗುರೂಜಿ ಮೃತದೇಹ ನೋಡುತ್ತಿದ್ದಂತೆ ಕುಟುಂಬದವರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ವಗ್ರಾಮದಲ್ಲಿ ವೈದಿಕರು ಪೂಜೆ ನೆರವೇರಿಸಿದರು. ಈ ವೇಳೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಂತಿಮ ದರ್ಶನ ಪಡೆದರು.
ಗುರೂಜಿ ಪಾರ್ಥೀವ ಶರೀರವನ್ನು ವೈಕುಂಠ ರಥ ವಾಹನದ ಮೂಲಕ ಮೆರವಣಿಗೆ ಮೂಲಕ ಕೇಶ್ವಾಪುರ ಸುಳ್ಳ ರಸ್ತೆಯ ಗುರೂಜಿ ಜಮೀನಿಗೆ ರವಾನಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.