ಗುರೂಜಿ ಅಂತಿಮ ದರ್ಶನ ಪಡೆದ ಪ್ರಿನ್ಸ್ ನಾಯಿಗೆ ಇದ್ದ ನಿಯತ್ತು ಮನುಷ್ಯನಿಗೆ ಇಲ್ಲವಾಯಿತೇ? ಇದು ಚಾರ್ಲಿ ಅಲ್ಲ, ಗುರೂಜಿಯ ಪ್ರಿನ್ಸ್!

ಗುರೂಜಿಯನ್ನೇ ಬರ್ಬರವಾಗಿ ಕೊಂದ ಶಿಷ್ಯಂದಿರು
ಮಹಾಂತೇಶ್ ನನ್ನು ನೌಕರಿಯಿಂದ ತೆಗೆದದ್ದು, ನಂತರ ಆತನ ಹೆಸರಲ್ಲಿ ಬೇನಾಮಿಯಾಗಿ ಮಾಡಿಸಿದ್ದ ಆಸ್ತಿಯನ್ನು ವಾಪಸ್ ಬರೆದುಕೊಡುವಂತೆ ಒತ್ತಡ ತಂದದ್ದು ಇತ್ಯಾದಿಗಳಿಂದಾಗಿ ಗುರೂಜಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಆದರೆ ಗುರೂಜಿ ಇಟ್ಟ ವಿಶ್ವಾಸದಂತೆ ನಡೆದುಕೊಳ್ಳದ್ದರಿಂದ ಆತನನ್ನು ನೌಕರಿಯಿಂದ ತೆಗೆಯಲಾಗಿತ್ತು. ಭ್ರಷ್ಟಾಚಾರ ಎಸಗಿದ್ದರಿಂದ ಆತನನ್ನು ನೌಕರಿಯಿಂದ ತೆಗೆದಿದ್ದರೂ ಆತನ ಹೆಂಡತಿ ವನಜಾಕ್ಷಿಯನ್ನು ತನ್ನ ಸಂಸ್ಥೆಯಲ್ಲಿಯೇ ಕೆಲಸದಲ್ಲಿ ಗುರೂಜಿ ಮುಂದುವರೆಸಿದ್ದರು. ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟ ಗುರೂಜಿಗೆ ಶಿಷ್ಟ ಕೊಟ್ಟ ಕಾಣಿಕೆ ಅಂದ್ರೆ ಸಾವು. ಯಾರೂ ನಿರೀಕ್ಷಿಸಲಾಗದ ರೀತಿಯಲ್ಲಿ ಭಯಾನಕವಾಗಿ ಹತ್ಯೆಗೈದಿದ್ದಾರೆ ಆರೋಪಿಗಳು.
ನಾಯಿಗಿದ್ದ ನಿಯತ್ತು ಮನುಷ್ಯನಿಗೆ ಇರದೇಹೋಯ್ತು
ಅತ್ತ ಶಿಷ್ಯಂದಿರು ಹಾಗೆ ಮಾಡಿದ್ರೆ, ಇತ್ತ ಗುರೂಜಿ ಸಾಕಿದ ನಾಯಿ ಪ್ರಿನ್ಸ್ ಮಾತ್ರ ತನ್ನ ನಿಯತ್ತನ್ನು ತೋರಿಸಿದೆ. ಗುರೂಜಿ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳಕ್ಕೆ ಅದನ್ನು ಕರೆತಂದು ಕಂಬಕ್ಕೆ ಕಟ್ಟಲಾಗಿತ್ತು. ಅದರ ಸಿಕ್ತ್ ಸೆನ್ಸ್ ಎಷ್ಟಿತ್ತೆಂದರೆ ಗುರೂಜಿಯ ಪಾರ್ಥೀವ ಶರೀರ ಹೊಲದ ಸಮೀಪ ಬರುತ್ತಿದ್ದಂತೆಯೇ ತಾನಿದ್ದಲಿಂದಲೇ ಊಳಿಡೋಕೆ ಆರಂಭಿಸಿತು. ಊಳಿಟ್ಟು ಕಾಲು ಕೆದರುತ್ತಾ ಕಣ್ಣೀರು ಹಾಕೋಕೆ ಶುರು ಮಾಡಿತು. ನೆರೆದವರೆಲ್ಲರೂ ನಾಯಿಯನ್ನು ನೋಡಿ ಅಚ್ಚರಿಗೊಂಡರಲ್ಲದೆ, ನಾಯಿಗಿದ್ದ ನಿಯತ್ತು ಮನುಷ್ಯನಿಗಿದ್ದರೆ ನಮ್ಮ ಗುರೂಜಿ ಕೊಲೆಯಾಗ್ತಿರರಿಲ್ಲ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡರು.
ಗುರೂಜಿ ಅಂತಿಮ ದರ್ಶನ ಪಡೆದ ಪ್ರಿನ್ಸ್
ಕುಟುಂಬದ ಸದಸ್ಯರು ತನ್ನ ಅಂತಿಮ ದರ್ಶನದ ವೇಳೆ ನಾಯಿ ಪ್ರಿನ್ಸ್ ಗೂ ಗುರೂಜಿಯ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಿಸಿದರು. ಈ ವೇಳೆ ಬಂದ ಪ್ರಿನ್ಸ್ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕಣ್ಣೀರು ಹಾಕಲಾರಂಭಿಸಿತು. ಕೊನೆಗೆ ಕುಟುಂಬದ ಸದಸ್ಯರು ಶವ ಪೆಟ್ಟಿಗೆಯ ಮೇಲೆಯೇ ಅದನ್ನು ಕುಳ್ಳಿರಿಸಿ ಗುರೂಜಿಯ ಅಂತಿಮ ದರ್ಶನ ಮಾಡಿಸಿದರು. ಅದೂ ಸ್ವಲ್ಪಹೊತ್ತು ಅಲ್ಲಿಯೇ ಕುಳಿತು ಕಂಬನಿ ಮಿಡಿಯಿತು.
ಪಾರ್ಥಿವ ಶರೀರ ನೋಡಿ ಕಣ್ಣೀರಿಟ್ಟ ನಾಯಿ
ಅಲ್ಲಿಂದ ಕೆಳಗೆ ತಂದ ನಂತರ ಸ್ವಲ್ಪಹೊತ್ತು ಸುಮ್ಮನೇ ಇದ್ದ ಪ್ರಿನ್ಸ್, ಅಂತ್ಯಕ್ರಿಯೆಗಾಗಿ ಗುರೂಜಿಯ ಶವವನ್ನು ಬಾಕ್ಸ್ ನಿಂದ ಹೊರ ತೆಗೆಯುತ್ತಿದ್ದಂತೆ ಬೊಗಳಿ ಊಳಿಡೋಕೆ ಶುರು ಮಾಡಿತು. ಕುಟುಂಬದ ಸದಸ್ಯರು ಏನೆಲ್ಲಾ ಸಮಾಧಾನ ಮಾಡಿದರೂ ಗುರೂಜಿಯ ಶವವನ್ನು ನೋಡೋದು, ಬೊಗಳೋದನ್ನು ಮಾಡಿತು. ಕೊನೆಗೆ ನೀರಿನ ಬಾಟಲ್ ಇಟ್ಟು ಬಾಯಿ ಮುಚ್ಚಿಸೋಕೆ ಯತ್ನಿಸಲಾಯಿತು. ಆದರೆ ಬಾಟಲನ್ನೂ ಕಿತ್ತೊಗೆದ ನಾಯಿ ಊಳಿಟ್ಟು ಕಣ್ಣೀರು ಹಾಕಿ, ಹಿಂದೆ ಮುಂದೆ ಓಡಾಡಲಾರಂಭಿಸಿತು. ಇದನ್ನು ನೋಡಿ ಕುಟುಂಬದ ಸದಸ್ಯರ ರೋದನೆ ಮುಗಿಲು ಮುಟ್ಟುವಂತಾಯಿತು.
ನಾಯಿ ನಿಯತ್ತಿನ ಪ್ರಾಣಿ ಅನ್ನೋದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಇಡೀ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯುವವರೆಗೂ ನಾಯಿ ಅಲ್ಲಿಯೇ ಇತ್ತು. ಎಲ್ಲ ವಿಧಿವಿಧಾನಗಳು ಪೂರೈಕೆಯಾದ ನಂತರ ನಾಯಿಯನ್ನು ಕುಟುಂಬದ ಸದಸ್ಯರು ಕರೆದೊಯ್ದರು. ಆದರೆ ಗುರೂಜಿ ಅಂತ್ಯಕ್ರಿಯೆ ವೇಳೆ ಪದೇ ಪದೇ ಮಳೆ ಬಂದಿದ್ದರಿಂದ ಒಂದಷ್ಟು ತೊಡಕಾಯಿತು. ಗುಂಡಿಯಲ್ಲಿ ಮಣ್ಣು ಮುಚ್ಚೋಕು ದೊಡ್ಡ ತೊಡಕಾಯಿತು. ಕೊನೆಗೆ ಜೆಸಿಬಿ ಸಹಾಯದಿಂದ ಗುಂಡಿಯನ್ನು ಮುಚ್ಚಿಸಿ, ಕೊನೆಗೆ ಅಂತ್ಯಕ್ರಿಯೆಯ ವಿಧಿ ವಿಧಾನ ಪೂರೈಸಾಯಿತು.