Karnataka News
Trending
5 ಕೋಟಿ ರೂಪಾಯಿ ಅನುದಾನದಲ್ಲಿ ವಾಕಿಂಗ್ ಟ್ರ್ಯಾಕ್, ಚರಂಡಿ, ನಾಲಾಗಳ ನಿರ್ಮಾಣ ಆರಂಭವಾಗಿದೆ. ಅಭಯ್ ಪಾಟೀಲ್

ಬೆಳಗಾವಿಯ ವಡಗಾವಿಯ ನಾಝರ್ ಕ್ಯಾಂಪ್‍ನಿಂದ ಗಣಪತಿ ಮಂದಿರವರೆಗೆ 5 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬರುವ ಮೂರು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿಯ ವಡಗಾವಿಯ ನಾಝರ್ ಕ್ಯಾಂಪ್‍ನ ಕೆಎಲ್‍ಇ ಚಾರಿಟೇಬಲ್ ಆಸ್ಪತ್ರೆಯಿಂದ ಗಣಪತಿ ಮಂದಿರವರೆಗೆ 1.5 ಕಿ.ಮೀ. ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿಕೊಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು.
ಇದೀಗ ಈ ಕಾಮಗಾರಿ ಆರಂಭವಾಗಿದ್ದು, 5 ಕೋಟಿ ರೂಪಾಯಿ ಅನುದಾನದಲ್ಲಿ ವಾಕಿಂಗ್ ಟ್ರ್ಯಾಕ್, ಚರಂಡಿ, ನಾಲಾಗಳ ನಿರ್ಮಾಣ ಆರಂಭವಾಗಿದೆ. ಬರುವ ಮೂರು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ಶಾಸಕ ಅಭಯ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.