National
BREAKING NEWS : ವಿವೋ ಇಂಡಿಯಾ ಮೇಲೆ ಇಡಿ ದಾಳಿ : 2 ಕೆಜಿ ಚಿನ್ನದ ಬಿಸ್ಕತ್, 73 ಲಕ್ಷ ನಗದು ಸೇರಿ 66 ಕೋಟಿ ಮೌಲ್ಯದ ನಗನಾಣ್ಯ ಜಪ್ತಿ

ನವದೆಹಲಿ : ದೇಶಾದ್ಯಂತ 48 ಸ್ಥಳಗಳಲ್ಲಿ ಶೋಧ ನಡೆಸಿದ ನಂತ್ರ ಜಾರಿ ನಿರ್ದೇಶನಾಲಯವು ವಿವೋ ಇಂಡಿಯಾದ 2 ಕೆಜಿ ಚಿನ್ನದ ಬಿಸ್ಕತ್, 73 ಲಕ್ಷ ನಗದು ಸೇರಿ 66 ಕೋಟಿ ರೂ.ಗಳ ಸ್ಥಿರ ಠೇವಣಿಗಳು ಮತ್ತು ವಿವಿಧ ಸಂಸ್ಥೆಗಳ 119 ಬ್ಯಾಂಕ್ ಖಾತೆಗಳನ್ನ ವಶಪಡಿಸಿಕೊಂಡಿದೆ.
ಇಡಿ ಪ್ರಕಾರ, ವಿವೋ ಇಂಡಿಯಾ 62,476 ಕೋಟಿ ರೂ.ಗಳನ್ನ (ಭಾರತದಿಂದ ಹೊರಹೋಗುವ ವಹಿವಾಟಿನ ಸುಮಾರು 50% ರಷ್ಟು) ಚೀನಾಕ್ಕೆ ಕಳುಹಿಸಿದೆ.
ಭಾರತದಲ್ಲಿ ತೆರಿಗೆ ಪಾವತಿಯನ್ನ ತಪ್ಪಿಸಲು ಭಾರತೀಯ ಸಂಯೋಜಿತ ಕಂಪನಿಗಳಲ್ಲಿನ ಭಾರಿ ನಷ್ಟ ತೋರಿಸುವ ಸಲುವಾಗಿ ಈ ಪಾವತಿಗಳನ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ವಿವೋ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ 23 ಸಂಬಂಧಿತ ಕಂಪನಿಗಳಾದ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್ನ್ಯಾಷನಲ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (GPICPL)ಗೆ ಸಂಬಂಧಿಸಿದ ಸ್ಥಳಗಳಲ್ಲಿ ಹಣಕಾಸು ತನಿಖಾ ಸಂಸ್ಥೆ ಶೋಧ ನಡೆಸಿತ್ತು.