ಮುಂದಿನ ವಾರದಲ್ಲಿ ‘ಎಣ್ಣೆ’ ದರದಲ್ಲಿ ಭಾರಿ ಇಳಿಕೆ! ಖಾದ್ಯ ತೈಲದ ಬೆಲೆಯಲ್ಲಿ ಲೀ.ಗೆ 10 ರೂ. ಇಳಿಕೆ

ನವದೆಹಲಿ, ಜೂನ್ 7: ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ದೇಶವನ್ನು ಹೊರಡಿಸಿದೆ. ಮುಂದಿನ ಒಂದು ವಾರದಲ್ಲಿ ಖಾದ್ಯ ತೈಲದ ತಯಾಕರು ಒಂದು ಲೀಟರ್‌ಗೆ 10 ರೂಪಾಯಿವರೆಗೆ ಬೆಲೆ ಕಡಿತಗೊಳಿಸುವಂತೆ ನಿರ್ದೇಶನ ನೀಡಿದೆ.
ಕಳೆದ ಒಂದು ವಾರದೊಳಗೆ ಖಾದ್ಯ ತೈಲದ ಬೆಲೆಯಲ್ಲಿ ಬದಲಾವಣೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚಿಸಿದೆ. ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಗಣನೀಯ ಇಳಿಕೆಯಾದ ನಂತರದಲ್ಲಿ ದೇಶದಲ್ಲೂ ಬೆಲೆ ಕಡಿತಗೊಳಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಭಾರತವು ತನ್ನ ಖಾದ್ಯ ತೈಲದ ಅಗತ್ಯತೆಗಿಂತ ಶೇಕಡಾ 60ರಷ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಲೆಗಳು ಹೆಚ್ಚು ಒತ್ತಡಕ್ಕೆ ಸಿಲುಕುವ ಸೂಚನೆಗಳು ಸಿಕ್ಕಿದ್ದವು. ಅದಾಗ್ಯೂ, ಬೆಲೆಯಲ್ಲಿ ತಿದ್ದುಪಡಿ ಕಂಡು ಬಂದಿದ್ದು, ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆಯಾಗಿದೆ. ಖಾದ್ಯ ತೈಲದ ಬೆಲೆ ಏರಿಕೆ ಮತ್ತು ಇಳಿಕೆಯ ಸುತ್ತಮುತ್ತಲಿನ ಬೆಳವಣಿಗೆಯನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.
By Rajashekhar Myageri
ಖಾದ್ಯ ತೈಲದ ಬೆಲೆಯಲ್ಲಿ ಲೀ.ಗೆ 10 ರೂ. ಇಳಿಕೆಕಳೆದ ತಿಂಗಳೇ ಖಾದ್ಯ ತೈಲದ ಬೆಲೆ ಇಳಿಕೆಯ ಬಗ್ಗೆ ಪ್ರಸ್ತಾಪವನ್ನು ಸಲ್ಲಿಸಲಾಗುತ್ತಿತ್ತು. ಒಂದು ಲೀಟರ್ ಖಾದ್ಯ ತೈಲದ ಬೆಲೆಯನ್ನು 10 ರಿಂದ 15 ರೂಪಾಯಿ ಇಳಿಕೆ ಮಾಡುವ ಬಗ್ಗೆ ಉದ್ದೇಶಿಸಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವ ಹಿನ್ನೆಲೆ ದೇಶದಲ್ಲಿ ಎಣ್ಣೆ ದರವನ್ನು ತಗ್ಗಿಸುವ ಸುಳಿವು ಸಿಕ್ಕಿದೆ. ಜಾಗತಿಕ ಬೆಲೆಗಳಲ್ಲಿ ಮತ್ತಷ್ಟು ಕುಸಿತವನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ, ಎಲ್ಲಾ ಖಾದ್ಯ ತೈಲ ಸಂಘಗಳು ಮತ್ತು ಪ್ರಮುಖ ತಯಾರಕರ ಸಭೆಯನ್ನು ಕರೆದರು. ಪ್ರಸ್ತುತ ಸಂದರ್ಭದಲ್ಲಿ ಜಾಗತಿಕವಾಗಿ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆ ಖಾದ್ಯ ತೈಲದ ಬೆಲೆಯನ್ನು ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಸಿಹಿಸುತ್ತಿ ನೀಡುವುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಇಳಿಕೆ
“ಕಳೆದ ಒಂದು ವಾರದಲ್ಲಿ ಖಾದ್ಯ ತೈಲದ ಬೆಲೆಯು ಜಾಗತಿಕ ಬೆಲೆಗಳು ಶೇಕಡಾ 10ರಷ್ಟು ಕುಸಿದಿದೆ. ಪ್ರಸ್ತುತ ಬೆಲೆ ಇಳಿಕೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ. ಜನರ ಮೇಲಿರುವ ಬೆಲೆ ಏರಿಕೆಯ ಬಿಸಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎಂಆರ್‌ಪಿಯನ್ನು ಕಡಿಮೆ ಮಾಡಲು ನಾವು ಸೂಚನೆ ನೀಡಿದ್ದೇವೆ,” ಎಂದು ಸಭೆಯ ನಂತರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ
ಖಾದ್ಯ ತೈಲದ ಬೆಲೆ ಇಳಿಕೆಗೆ ಒಂದೇ ವಾರ ಸಾಕಪ್ಪಾ ಸಾಕು!
“ದೇಶದಲ್ಲಿ ಖಾದ್ಯ ತೈಲದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿರುವವರಿಗೆ ಉತ್ತರ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಎಲ್ಲಾ ರೀತಿಯ ಖಾದ್ಯ ತೈಲಗಳಾದ ತಾಳೆ ಎಣ್ಣೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿವರೆಗೆ ಇಳಿಕೆ ಆಗಲಿದೆ. ಒಂದು ಬಾರಿ ಖಾದ್ಯ ತೈಲಗಳ ದರ ಇಳಿಕೆಯಾದರೆ, ಅಡುಗೆ ಎಣ್ಣೆಯ ದರವೂ ಇಳಿಕೆಯಾಗಲಿದೆ,” ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಜುಲೈ 6ರಂದು ಚಿಲ್ಲರೆ ದರದಲ್ಲಿ ತಾಳೆ ಎಣ್ಣೆ ಕೆಜಿಗೆ 144.16 ರೂ, ಸೂರ್ಯಕಾಂತಿ ಎಣ್ಣೆ ಕೆಜಿಗೆ 185.77 ರೂ, ಸೋಯಾಬೀನ್ ಎಣ್ಣೆ ಕೆಜಿಗೆ 185.77 ರೂ, ಸಾಸಿವೆ ಎಣ್ಣೆ ಕೆಜಿಗೆ 177.37 ರೂ. ಮತ್ತು ಕಡಲೆ ಎಣ್ಣೆ ಕೆಜಿಗೆ 187.93 ರೂ. ಆಗಿದೆ.
ದೇಶದಲ್ಲಿ ಅಡುಗೆ ಎಣ್ಣೆ ದರದಲ್ಲಿ ವ್ಯತ್ಯಾಸ ಕಂಡು ಬಾರದಂತೆ ಸೂಚನೆ
ಪ್ರಸ್ತುತ ವಿವಿಧ ವಲಯಗಳಲ್ಲಿ ಅಡುಗೆ ಎಣ್ಣೆಯ ದರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಒಂದು ಲೀಟರ್ ಎಣ್ಣೆಯ ದರದಲ್ಲಿ ಕನಿಷ್ಠ 3 ರಿಂದ 5 ರೂಪಾಯಿ ವ್ಯತ್ಯಾಸ ಕಂಡು ಬರುತ್ತಿದೆ. ಈ ವ್ಯತ್ಯಾಸವನ್ನು ಹೋಗಲಾಡಿಸುವ ಮೂಲಕ ಅಡುಗೆ ಎಣ್ಣೆ ದರದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಸದ್ಯ ವಿವಿಧ ವಲಯಗಳಲ್ಲಿ ಮಾರಾಟವಾಗುವ ಒಂದೇ ಬ್ರಾಂಡ್‌ಗಳ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರಿಂದ 5 ರೂಪಾಯಿ ವ್ಯತ್ಯಾಸವಿದೆ. ಸಾರಿಗೆ ಮತ್ತು ಇತರ ವೆಚ್ಚಗಳು ಈಗಾಗಲೇ ಎಂಆರ್‌ಪಿಯಲ್ಲಿ ಅಂಶವಾಗಿರುವಾಗ, ಎಂಆರ್‌ಪಿಯಲ್ಲಿ ವ್ಯತ್ಯಾಸವಾಗಬಾರದು. ಖಾದ್ಯ ತೈಲದ ಕಂಪನಿಗಳು ಸಹ ಈ ವಿಷಯದ ಬಗ್ಗೆ ಒಪ್ಪಿಕೊಂಡಿವೆ,” ಎಂದು ಅವರು ಹೇಳಿದ್ದಾರೆ.