fbpx
Karnataka NewsScience

ಎಲ್ಲೆಲ್ಲೂ ಮಳೆ; ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ ಇಷ್ಟಿದೆ

Major Reservoir Water Level: ಜಲ ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು (Water) ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ.
ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು (Reservoir) ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಕರುನಾಡಲ್ಲಿ ಅಬ್ಬರಿಸುತ್ತಿರುವ ವರುಣ

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು ನಿತ್ಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿವೆ.

ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕೆಆರ್​ಎಸ್​ ಜಲಾಶಯ – KRS Dam
ಗರಿಷ್ಠ ಮಟ್ಟ – 124.80 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 36.72 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 16.25 ಟಿಎಂಸಿ
ಇಂದಿನ ಒಳಹರಿವು – 29,468 ಕ್ಯೂಸೆಕ್ಸ್​
ಇಂದಿನ ಹೊರಹರಿವು – 3,171 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ – Tungabhadra Dam
ಗರಿಷ್ಠ ನೀರಿನ ಮಟ್ಟ – 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ – 52.99 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 34.30 ಟಿಎಂಸಿ
ಇಂದಿನ ಒಳಹರಿವು – 34,075 ಕ್ಯೂಸೆಕ್ಸ್​
ಇಂದಿನ ಹೊರಹರಿವು – 331 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 13.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 14.83 ಟಿಎಂಸಿ
ಇಂದಿನ ಒಳಹರಿವು – 15,019 ಕ್ಯೂಸೆಕ್ಸ್​
ಇಂದಿನ ಹೊರಹರಿವು – 1000 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam
ಗರಿಷ್ಠ ಮಟ್ಟ – 1,704 ಅಡಿ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 53.70 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 89.93 ಟಿಎಂಸಿ
ಇಂದಿನ ಒಳಹರಿವು- 42,858 ಕ್ಯೂಸೆಕ್ಸ್​
ಇಂದಿನ ಹೊರಹರಿವು – 451 ಕ್ಯೂಸೆಕ್ಸ್​

Karnataka Rains: ಕರಾವಳಿಯಲ್ಲಿ ಮುಂದುವರೆದ ವರುಣನ ಅಬ್ಬರ, 3 ಜಿಲ್ಲೆಗಳಲ್ಲಿ ನಾಳೆಯೂ ಶಾಲಾ ಕಾಲೇಜಿಗೆ ರಜೆ ಘೋಷಣೆ

ಭದ್ರಾ ಜಲಾಶಯ-Bhadra Dam
ಗರಿಷ್ಠ ಮಟ್ಟ – 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 43.44 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 38.72 ಟಿಎಂಸಿ
ಇಂದಿನ ಒಳಹರಿವು- 26,004 ಕ್ಯೂಸೆಕ್ಸ್​
ಇಂದಿನ ಹೊರಹರಿವು – 136 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ – 662.91 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 6.90 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 24.80 ಟಿಎಂಸಿ
ಇಂದಿನ ಒಳಹರಿವು – 5,592 ಕ್ಯೂಸೆಕ್ಸ್​​
ಇಂದಿನ ಹೊರಹರಿವು – 2,212 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 11.85 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 19.09 ಟಿಎಂಸಿ
ಇಂದಿನ ಒಳಹರಿವು – 1,664 ಕ್ಯೂಸೆಕ್ಸ್​
ಇಂದಿನ ಹೊರಹರಿವು – 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ – 2,922 ಅಡಿ​
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 28.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 17.49 ಟಿಎಂಸಿ
ಇಂದಿನ ಒಳಹರಿವು – 11,969 ಕ್ಯೂಸೆಕ್ಸ್​​
ಇಂದಿನ ಹೊರಹರಿವು – 250 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ – 594.36 ಮೀಟರ್
​ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 4.84 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.47 ಟಿಎಂಸಿ
ಇಂದಿನ ಒಳಹರಿವು – 9,792 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ – 871.38 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.99 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.42 ಟಿಎಂಸಿ
ಇಂದಿನ ಒಳಹರಿವು – 12,644 ಕ್ಯೂಸೆಕ್ಸ್​
ಇಂದಿನ ಹೊರಹರಿವು – 11,960 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam
ಗರಿಷ್ಠ ಮಟ್ಟ – 554.44 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 33.64 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 62.30 ಟಿಎಂಸಿ
ಇಂದಿನ ಒಳಹರಿವು – 41,906 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ – 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 26.08 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 57.50 ಟಿಎಂಸಿ
ಇಂದಿನ ಒಳಹರಿವು – 34,845 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ – 492.25 ಮೀಟರ್
ಒಟ್ಟು ಸಾಮರ್ಥ್ಯ – 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.92 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 26.39 ಟಿಎಂಸಿ
ಇಂದಿನ ಒಳಹರಿವು – 691 ಕ್ಯೂಸೆಕ್ಸ್​
ಇಂದಿನ ಹೊರಹರಿವು – 228 ಕ್ಯೂಸೆಕ್ಸ್

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: