ನಿಪ್ಪಾಣಿ ನಗರ & ಗ್ರಾಮೀಣ ನೂತನ ಪೊಲೀಸ್ ಠಾಣೆ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಭ್ರಷ್ಟರನ್ನು ಮಟ್ಟ ಹಾಕುವವರೆಗೂ, ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಮತ್ತು ಅಧಿಕಾರದಿಂದ ಕೆಳಗಿಯುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಖಡಕ್ಕಾಗಿಯೆ ಗುಡುಗಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣೆ ಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪಿಎಸ್‌ಐ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ, ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು. ಪಿಎಸ್‌ಐ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು, ಭ್ರಷ್ಟರನ್ನು ಮಟ್ಟ ಹಾಕುವ ವರೆಗೂ, ವಿಶ್ರಮಿಸುವುದಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಗುಡುಗಿದರು.
ನಿಪ್ಪಾಣಿ ಯಲ್ಲಿ ಬ್ರಿಟಿಷ್ ಕಾಲದ ಪೊಲೀಸ್ ಠಾಣೆಗಳಿದ್ದು. ಮಳೆಗಾಲದ ಸಮಯದಲ್ಲಿ ಸೋರುತ್ತಿದ್ದವು. ಇದರಿಂದಾಗಿ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸಲು ಬಹಳಷ್ಟು ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಇಲ್ಲಿನ ಶಾಸಕರಾದ ಶಶಿಕಲಾ ಜೊಲ್ಲೆಯವರು ಸರಕಾರದ ಗಮನಕ್ಕೆ ತಂದು ಠಾಣೆಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅದರ ಉದ್ಘಾಟನೆ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಭಾಗ್ಯ ಎಂದರು.
ಈವೇಳೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನಿಪ್ಪಾಣಿ ನಗರದಲ್ಲಿ ಮೂರು ಪೊಲೀಸ್ ಠಾಣೆಗಳಲಿವೆ. ಈಗ ಎರಡೂ ಠಾಣೆಗಳಿಗೆ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿದೆ ಹಾಗೂ ಬಸವೇಶ್ವರ ಚೌಕ ಪೊಲಿಸ್ ಠಾಣೆಗೆ ಇಷ್ಟು ದಿನ ಸ್ಥಳದ ಅಭಾವ ಇತ್ತು. ಆದರೆ ನಮ್ಮ ನಿಪ್ಪಾಣಿ ನಗರಸಭೆಯ ವತಿಯಿಂದ ೨೭ ಗುಂಟೆಯಷ್ಟು ಜಾಗವನ್ನು ನೀಡಲಾಗಿದೆ.
ಬರುವ ದಿನಗಳಲ್ಲಿ ಅದರ ಕಾರ್ಯವನ್ನು ಕೂಡಾ ಕೈಗೊಳ್ಳುವ ಭರವಸೆಯನ್ನು ನೀಡಿದರು ಬೈಟ:ಶಶಿಕಲಾ ಜೊಲ್ಲೆ
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಪೊಲೀಸ್ ಆಯುಕ್ತರಾದ ಎಮ್ ಬಿ ಬೊರಲಿಂಗಯ್ಯ.ಜಿಲ್ಲಾ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಉಪವರಿಷ್ಠಾಧಿಕಾರಿ ಬಸವರಾಜ ಎಲಿಗಾರ ಮುಂತಾದವರು ಹಾಜರಿದ್ದರು