ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಸವದತ್ತಿ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ: ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದೇನು..!!

ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ದಾವಣಗೆರೆಯಲ್ಲಿ ಮಾಡಲು ನಿರ್ಧರಿಸಿದ್ದು ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಬೆಂಬಲವನ್ನು ಸೂಚಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ರವರು, ಎಐಸಿಸಿ ಹಾಗೂ ಕೆಪಿಸಿಸಿ ಮೂಲಕ ಯಾವೆಲ್ಲ ಹೋರಾಟಗಳನ್ನು ಮಾಡಲಾಯಿತೋ ಮತ್ತೆ ಆ ಎಲ್ಲರನ್ನು ಹುಮ್ಮಸ್ಸು ಮಾಡುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಿದ್ದರಾಮೋತ್ಸವ ಕಾರ್ಯಕ್ರಮ ಮೊದಲು ಪಕ್ಷದಿಂದ ದೂರವಾಗಿತ್ತು. ಆದರೆ ಅದಕ್ಕೆ ಪಕ್ಷ ಕೂಡ ಬೆಂಬಲ ಸೂಚಿಸಿದೆ. ಬೆಳಗಾವಿಯಿಂದ ಎಲ್ಲಾ ಕ್ಷೆತ್ರಗಳಿಂದ ಜನ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಕುರಿತಂತೆ ಇನ್ನೂ ಸಭೆಗಳಾಗಬೇಕು.
ಈ ಕಾರ್ಯಕ್ರಮ ಅಭಿಮಾನಿಗಳ ಸಂಘದಿಂದಲೇ ನಡೆಯುತ್ತದೆ. ಆದರೆ ಪಕ್ಷವೂ ಕೂಡ ಇದಕ್ಕೆ ಸಹಕಾರ ಮಾಡುತ್ತದೆ ಎಂದು ಡಿಕೆಶಿ ತಿಳಿಸಿದ್ದಾರೆ. ಎಲ್ಲರೂ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹಾಗಾಗಿ ದಾವಣಗೆರೆಯಲ್ಲಿ ಈ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಎಲ್ಲರಿಗೂ ಬರು ಹೋಗುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ದಾವಣಗೆರೆಯಲ್ಲಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ, 13ನೇ ತಾರೀಕು ಈ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ನಂತರದಲ್ಲಿ ಯಾರ್ಯಾರಿಗೆ ಆಹ್ವಾನ ನೀಡಲಾಗಿದೆ ಎಂಬುದರ ಬಗ್ಗೆ ತಿಳಿದು ಬರಲಿದೆ ಎಂದರು.
ಇತ್ತೀಚೆಗೆ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನೂ ಇಲ್ಲ. ನಾನು ಎಲ್ಲರೊಂದಿಗೆ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿದ್ದೇನೆ. ರಾಮದುರ್ಗಕ್ಕೆ ಹೋದಾಗ ನಮ್ಮ ಕಾರ್ಯಕ್ರಮಗಳು ಬೇರೆ ಬೇರೆಯಾಗಿದ್ದವು. ನಾವೆಲ್ಲ ಬೇರೆ ಕಾರ್ಯಕ್ರಮಗಳಿಗೆ ಹೋಗಬೇಕಿತ್ತು. ಹಾಗಾಗಿ ನಮ್ಮ ಕಾರ್ಯಕ್ರಮಕ್ಕೆ ನಾವು ಹೋದೆವು. ಅವರು ಅವರ ಕಾರ್ಯಕ್ರಮಕ್ಕೆ ಹೋದ್ರು. ಅದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಎಲ್ಲರೊಂದಿಗೆ ಚೆನ್ನಾಗಿದ್ದೇನೆ. ಯಾವಾಗಲೂ ಸಿದ್ದರಾಮಯ್ಯನವರೊಂದಿಗೆ ಇರುತ್ತೇವೆ. ಪಕ್ಷದಲ್ಲಿ ಉತ್ತಮ ಅವಕಾಶಗಳು ಎಲ್ಲರಿಗೂ ಒಂದು ದಿನ ಬಂದೇ ಬರುತ್ತವೆ ಎಂದರು.
ಇನ್ನು ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರ ಚುನಾವಣಾ ಕ್ಷೇತ್ರ ಆಯ್ಕೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಸವದತ್ತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆಂಬ ವಿಚಾರವಾಗಿ ಎಲ್ಲಿಯೂ ಚರ್ಚೆಯಾಗಿಲ್ಲ. ಇನ್ನು ಈ ಕುರಿತಂತೆ ಪಕ್ಷದಲ್ಲಿ ನಿರ್ಣಯವಾದರೆ ಅದನ್ನು ಒಪ್ಪಲೇಬೇಕು. ಏನೂ ಮಾಡಕ್ಕಾಗಲ್ಲ. ಇನ್ನು ಸವದತ್ತಿಯಲ್ಲಿ ಮೂವರು ಜನರ ಪೈಕಿ ಒಬ್ಬರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡುತ್ತೇವೆ. ಅರಲ್ಲಿಯೇ ಒಮ್ಮತ ಮೂಡಿದರೆ ಅದು ಇನ್ನೂ ಉತ್ತಮ ಎಂದರು.
ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಬಲ ಬಿಜೆಪಿ ಲಿಂಗಾಯತ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡುತ್ತಾರೆ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಹೌದು ಈ ಕುರಿತಂತೆ ಕೆಲ ಪ್ರಭಾವೀ ಬಿಜೆಪಿ ನನಾಯಕರು ಕಾಂಗ್ರೆಸ್‍ನತ್ತ ಬರುವ ಕುರಿತಂತೆ ವಿಚಾರ ನಡೆಸಿದ್ದಾರೆ. ಇನ್ನು ಈಗಾಗಲೇ ಅವರು ತಮ್ಮ ತಮ್ಮ ಗ್ರೂಪ್‍ಗಳಲ್ಲಿ ಚರ್ಚೆಯನ್ನು ನಡೆಸಿದ್ದಾರೆ. ಇನ್ನು ಜನವರಿ ವೇಳೆಗೆ ಯಾರೆಲ್ಲ ಕಾಂಗ್ರೆಸ್‍ಗೆ ಬಬರಲಿದ್ದಾರೆ ಎಂಬುದು ಗೊತ್ತಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದ ಮೇಲೆ ಲಿಂಗಾಯತ ನಾಯಕರು ಕಾಂಗ್ರೆಸ್‍ಗೆ ಬರುವ ಮನಸ್ಸು ಮಾಡಿದ್ದಾರೆ. ಇನ್ನು ಮುಂದಿನ ಚುನಾವಣೆಯ ನಂತರ ಯಡಯೂರಪ್ಪನವರನ್ನ ಇನ್ನೂ ಸೈಡ್‍ಲೈನ್ ಮಾಡಲಿದ್ದಾರೆ ಎಂದರು.