Karnataka News
ಕೆನಾಲ್ ನಲ್ಲಿ ಕೊಚ್ಚಿ ಹೋದ ಕಾರು: ಇಬ್ಬರು ಸಾವು ಓರ್ವ ಪ್ರಾಣಾಪಾಯದಿಂದ ಬಚಾವ್

ಬೆಳಗಾವಿ : ಕಾಲುವೆಯಲ್ಲಿ ತುಂಬಿದ್ದ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಓರ್ವ ಬಚಾವ್ ಆಗಿದ್ದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದಲ್ಲಿ ನಡೆದಿದೆ.
ಮಹಾದೇವ ಚಿಗರಿ (26), ಸುರೇಶ್ ಬಡಚಿ(27) ಮೃತ ದುರ್ದೈವಿಗಳು, ಶ್ರೀಕಾಂತ್ ನಡುವಿನ ಮನಿ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.