ಪಂಜಾಬ್ ಸಿಎಂ ಮಾನ್ ಪತ್ನಿ ಯಾರು ಗೊತ್ತಾ ?

ಪಂಜಾಬ್ ಮುಖ್ಯಮಂತ್ರಿ 48 ವರ್ಷದ ಭಗವಂತ್ ಮಾನ್ ಇತ್ತೀಚೆಗಷ್ಟೇ ವಿವಾಹವಾದರು. ಚಂಡೀಗಢದ ತಮ್ಮ ನಿವಾಸದಲ್ಲಿ ಡಾ ಗುರುಪ್ರೀತ್ ಕೌರ್ ಅವರನ್ನು ವರಿಸಿದರು.
1993ರಲ್ಲಿ ಜನಿಸಿದ ಪಂಜಾಬ್ ಸಿಎಂ ಪತ್ನಿ ಡಾ. ಗುರುಪ್ರೀತ್ ಕೌರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.
2018ರಲ್ಲಿ ಹರಿಯಾಣದ ಮುಲ್ಲಾನಾದಲ್ಲಿರುವ ಮಹಷಿರ್ ಮಾರ್ಕಂಡೇಶ್ವರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಕೂಡ ಪಡೆದಿದ್ದಾರೆ. ಮಾನ್ ಅವರ ಮಾವ ಕೃಷಿಕರಾಗಿದ್ದರೆ, ಅವರ ಅತ್ತೆ ಗೃಹಿಣಿ.
48 ವರ್ಷದ ಭಗವಂತ್ ಮಾನ್ಗೆ ಇದು ಎರಡನೇ ಮದುವೆಯಾಗಿದೆ. ಅವರು 2015 ರಲ್ಲಿ ತಮ್ಮ ಮೊದಲ ಹೆಂಡತಿಯಿಂದ ದೂರಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಸೀರತ್ ಕೌರ್ (21) ಮತ್ತು ಮಗ ದಿಲ್ಶನ್ (17).
ಈ ವಿವಾಹ ಸಮಾರಂಭದಲ್ಲಿ ಮಾನ್ ತಾಯಿ, ಸಹೋದರಿ, ಸಂಬಂಧಿಕರು ಮತ್ತು ಕೆಲವೇ ಅತಿಥಿಗಳು ಭಾಗವಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬ, ಆಪ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಹರಿದಾಡುತ್ತಿವೆ. ಚಿನ್ನದ ಬಣ್ಣದ ವೇಷಭೂಷಣ ಮತ್ತು ಹಳದಿ ಪೇಟವನ್ನು ಧರಿಸಿ ಸಾಂಪ್ರದಾಯಿಕವಾಗಿ ವರ ವಧು ಕಾಣಿಸಿಕೊಂಡರು.