ಮಾಲೀಕನ ಕೈಕಾಲುಗಳನ್ನು ಕಟ್ಟಿ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದ ಗ್ಯಾಂಗ್: ಸಿನಿಮೀಯ ಶೈಲಿಯಲ್ಲಿ ಅರೆಸ್ಟ್
1.58 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರ ಶ್ಲಾಘನೆ

ಬೆಂಗಳೂರು, ಜುಲೈ 08: ಗ್ರಾಹಕರ ಸೋಗಿನಲ್ಲಿ ಬಂದು ಪಿಸ್ತೂಲ್ ತೋರಿಸಿ ಅಂಗಡಯ ಮಾಲೀಕನ ಕೈಕಾಲುಗಳನ್ನು ಕಟ್ಟಿ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದ ಗ್ಯಾಂಗ್ ಅನ್ನು 72 ಗಂಟೆಗಳಲ್ಲೇ ಬಂಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ರಾಜಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಲಸಂದ್ರದಲ್ಲಿರುವ ರಾಮದೇವ್ ಜ್ಯುವಲರ್ಸ್ ಅಂಡ್ ಬ್ರೋಕರ್ಸ್ ಅಂಗಡಿಯಲ್ಲಿ ಜುಲೈ 04 ಬೆಳಗ್ಗೆ 7.15ಕ್ಕೆ ಅಂಗಡಿಯನ್ನು ತೆರೆದು ಲಾಕರ್ ಕೀ ತೆರೆದಿಟ್ಟು ಅಂಗಡಿಯಲ್ಲಿರುವಾಗ ಇಬ್ಬರು ಅಪರಿಚಿತರು ಬಂದಿದ್ದಾರೆ. ಬೆಳ್ಳಿಯ ಸರವನ್ನು ಖರೀದಿಸುವ ನಾಟವಾಡಿದ್ದಾರೆ. ಇದೇ ಸಮಯಕ್ಕೆ ನೌಕರನಿಗೆ ಪಿಸ್ತೂಲ್ ತೋರಿಸಿ ಲಾಕರ್ ಬಳಿ ಎಳೆದುಕೊಂಡು ಹೋಗಿ ಕೈ ಕಾಲು ಕಟ್ಟಿದ್ದಾರೆ. ಅದೇ ಸಮಯಕ್ಕೆ ಬ್ಯಾಗ್ ಹಿಡಿದು ಬಂದ ಮತ್ತಿಬ್ಬರು ದುಷ್ಕರ್ಮಿಗಳು ಗ್ರಾಹಕರು ಅಡವಿಟ್ಟಿದ್ದ ಚಿನ್ನ ಬೆಳ್ಳಿ, ಮಾರಾಟಕ್ಕಿಟ್ಟಿದ್ದ ಚಿನ್ನಾಭರಣವನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದರು.
ಕಿಲಾಡಿ ಕಳ್ಳರು ಚಿನ್ನಾಭರಣವನ್ನು ದೋಚುವ ಜೊತೆಗೆ ನೌಕರನ ಮೊಬೈಲ್ ಫೋನ್, ಅಂಗಡಿ ಕೀ ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಸಹ ದೋಚಿಕೊಂಡು ಹೋಗಿರುತ್ತಾರೆ. ಸಾಕ್ಷ್ಯಗಳನ್ನು ಕದ್ದು ಹೋಗಿದ್ದ ಕೇಸನ್ನು ಬೆನ್ನತ್ತಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿರುವುದಲ್ಲದೇ ಚಿನ್ನಾಭರಣವನ್ನು ವಶಕ್ಕೆ ಪಡೆಯುವುದರಲ್ಲೂ ಸಕ್ಸಸ್ ಆಗಿದ್ದಾರೆ.
ಸಿನಿಮೀಯ ಶೈಲಿಯ ಫೈರಿಂಗ್ಮೈಲಸಂದ್ರದಲ್ಲಿರುವ ರಾಮದೇವ್ ಜ್ಯುವಲರ್ಸ್ ಅಂಡ್ ಬ್ರೋಕರ್ಸ್ ನೌಕರ ಧರ್ಮಪಾಲ್ ನೀಡಿದ ಸುಳಿವು ಮತ್ತು ಕೆಲವು ತಾಂತ್ರಿಕ ಎವಿಡೆನ್ಸ್‌ನಿಂದ ಗುಜರಾತ್‌ಗೆ ತೆರಳುತ್ತಾರೆ. ಈ ವೇಳೆಯಲ್ಲಿ ರಾಜಸ್ಥಾನದಲ್ಲಿ ಆರೋಪಿಗಳಿರುವುದು ಗೊತ್ತಾಗಲಿದೆ. ರಾಜಸ್ಥಾನಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಹೋಗವ ವೇಳೆ ಆರೋಪಿಗಳು ಪಿಸ್ತೂಲ್‌ನಿಂದ ಫೈಯರ್ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನದಲ್ಲಿರುವ ಐಪಿಎಸ್ ದಿನೇಶ್
ಕರ್ನಾಟಕದಿಂದ ಹೊರರಾಜ್ಯಕ್ಕೆ ತೆರಳಿ ಖತರ್ನಾಕ್‌ಗಳನ್ನು ಬಂಧಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕನ್ನಡಿಗ ಐಪಿಎಸ್ ಅಧಿಕಾರಿ ದಿನೇಶ್ ಬಳಿ ಸಹಾಯವನ್ನು ಕೇಳಿದ್ದಾರೆ. ಮೊದಲು ಅಹಮದಾಬಾದ್‌ನಲ್ಲಿರುವ ಮಾಹಿತಿ ಆಧರಿಸಿ ಅಲ್ಲಿನ ಪೊಲೀಸರ ಜೊತೆ ಮಾತನಾಡಲಾಗುತ್ತೇ. ಆ ಬಳಿಕ ರಾಜಸ್ಥಾನದ ಉದಯಪುರದ ಕಡೆ ಇರುವುದು ಗೊತ್ತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅದೃಷ್ಟವೆಂಬಂತೆ ಉದಯ್ ಪುರದಲ್ಲಿ ದಿನೇಶ್ ಇರುತ್ತಾರೆ. ಕನ್ನಯ್ಯಾ ಲಾಲ್ ಹತ್ಯೆಯಾಗಿದ್ದರಿಂದ ಈ ಮೊದಲು ಉದಯಪುರದಲ್ಲೂ ಎಸ್ಪಿಯಾಗಿ ಸೇವೆಯನ್ನು ಸಲ್ಲಿಸಿದ್ದ ದಿನೇಶ್ ರನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಳುಹಿಸಲಾಗಿರುತ್ತದೆ. ಇದೇ ವೇಳೆ ಕರ್ನಾಟಕ ಪೊಲೀಸರು ತೆರಳಿದ್ದರಿಂದ ಸ್ಥಳೀಯ ಎಸ್ಪಿ ಮತ್ತು ಎಎಸ್ಪಿಗಳಿಗೆ ಮಾಹಿತಿ ನೀಡಿ ಸಹ ಕಾರ ನೀಡುವಂತೆ ಹೇಳುತ್ತಾರೆ. ಕರ್ನಾಟಕ ಪೊಲೀಸರ ಜೊತೆ ರಾಜಸ್ಥಾನ ಪೊಲೀಸರು ಕಾರ್ಯಾಚರಣೆಗೆ ಬರುತ್ತಾರೆ. ಆರೋಪಿಗಳು ಫೈಯರ್ ಮಾಡುತ್ತಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿ ಐಪಿಎಸ್ ದಿನೇಶ್ ಹೆಸರನ್ನು ಹೇಳಿದ ಮೇಲೆ ಆರೋಪಿಗಳನ್ನು ಫೈಯರ್ ನಿಲ್ಲಿಸಿ ಸಿಕ್ಕಿಬೀಳುತ್ತಾರೆ.
ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರ ಶ್ಲಾಘನೆ
ಎಲೆಕ್ಟ್ರಾನಿಕ್ ಸಿಟಿ ಇನ್ಸ್ಪೆಕ್ಟರ್ ನಂಜೇಗೌಡ ಸಬ್‌ಇನ್ಸ್ಪೆಕ್ಟರ್ ಈಶ್ವರ್ ನೇತೃತ್ವದ ತಂಡ ದೇವರಾಮ್ ಈ ಹಿಂದೆ ಕೂಡ ನಗರದಲ್ಲಿ ಹಲವು ರಾಬರಿ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜೈಲಿನಿಂದ ಬಂದು ಮತ್ತೆ ದೊಡ್ಡ ಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ಡಕಾಯಿತ ಮಾಡಲು ಪ್ಲಾನ್ ಮಾಡಿದ್ದ.ಇನ್ನೂ ಪ್ರಕರಣ ಸಂಬಂಧ ದೇವರಾಮ್, ರಾಹುಲ್, ರಾಮ್ ಸಿಂಗ್, ಅನಿಲ್ ಬಂಧನವಾಗಿದ್ದು ಮತ್ತೊಬ್ಬ ಆರೋಪು ವಿಷ್ಣು ಪ್ರದಾದ್ ಸಿಂಗ್ ತಲೆ ಮರೆಸಿಕೊಂಡಿದ್ದಾನೆ. ಈಶಾನ್ಯ ವಿಭಾಗದ ಡಿಸಿಪಿ ಸಿಕೆ ಬಾಬ ಮತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
1.58 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
ಇನ್ನು ಆರೋಪಿ ದೇವರಾಮ್ ವಿರುದ್ದ ಚಂದ್ರಲೇಔಟ್ , ಹಳೇಬೀಡು, ಜ್ಞಾನಭಾರತಿ, ರಾಜಸ್ಥಾನದ ಬೇಗೂನ್, ಅಭುಪರ್ವತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕಳ್ಳರನ್ನು ಬೆನ್ನಟ್ಟಿ ಹಿಡಿದ ಪರಿಣಾಮದಿಂದಾಗಿ ಕಳ್ಳರು ಕದ್ದಿದ್ದ 1.58 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.