Crime NewsKarnataka News
ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ನಕಲಿ ಕಾಲ್ ಸೆಂಟರ್ ಮೇಲೆ ದಾಳಿ; 6 ಮಂದಿ ಅರೆಸ್ಟ್
Fake call center raided by Whitefield police.

ಬೆಂಗಳೂರು: ನಗರದ ವೈಟ್ ಫೀಲ್ಡ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಗುಜರಾತ್ ಮೂಲದ ಆರು ಜನರನ್ನು ಬಂಧಿಸಿದ್ದಾರೆ.
ಬಂಧಿತರಿಂದ 127 ಡೆಸ್ಕ್ ಟಾಪ್ ಗಳು, ನಾಲ್ಕು ಲ್ಯಾಪ್ ಟಾಪ್ ಗಳು, 150 ಹೆಡ್ ಫೋನ್ ಗಳು, 10 ಆಂತರಿಕ ಹಾರ್ಡ್ ಡಿಸ್ಕ್ ಗಳು, ಆರು ಐಫೋನ್ ಗಳು, ಮೂರು ಐಷಾರಾಮಿ ಕಾರುಗಳು, ಎರಡು ಶಾಲಾ ವ್ಯಾನ್ ಗಳು, ಒಂದು ಟೆಂಪೋ ಟ್ರಾವೆಲರ್ ಮತ್ತು ₹ 18 ಲಕ್ಷ ನಗದು ಸೇರಿದಂತೆ ₹ 2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.