fbpx
National

ಅಮರನಾಥ ಮೇಘಸ್ಫೋಟದ: ಸಾವಿನ ಸಂಖ್ಯೆ ಹೆಚ್ಚಳ, 40ಕ್ಕೂ ಹೆಚ್ಚು ಜನ ನಾಪತ್ತೆ

ಶ್ರೀನಗರ ಜುಲೈ 9: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ (ಜುಲೈ 8) ಸಂಭವಿಸಿದ ಮೇಘಸ್ಫೋಟದಿಂದಾಗಿ ಸಾವಿನ ಸಂಖ್ಯೆ ಉಲ್ಬಣಗೊಂಡಿದೆ. ಈವರೆಗೆ 15 ಜನರು ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಮುಂದಿನ ಸೂಚನೆ ಬರುವವರೆಗೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಮೇಘಸ್ಫೋಟ ನಿನ್ನೆ ಸಂಜೆ 5:30 ರ ಸುಮಾರಿಗೆ ವರದಿಯಾಗಿದೆ. ಇದರ ತೀವ್ರತೆಗೆ ಗುಹೆಯ ದೇಗುಲದ ಸಮೀಪವಿರುವ ತಂಗುದಾಣಗಳು ಮತ್ತು ಶಡ್‌ ಹಾಗೂ ಅಂಗಡಿಗಳು ಕೊಚ್ಚಿಹೋಗಿವೆ. ಭದ್ರತಾ ಪಡೆಗಳ ವಿಪತ್ತು ನಿರ್ವಹಣಾ ಸಂಸ್ಥೆಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಆದರೆ ಕಷ್ಟಕರವಾದ ಭೂಪ್ರದೇಶದ ಕಾರಣ ರಾತ್ರಿಯ ಸಮಯದಲ್ಲಿ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗಿದ್ದು ಇಂದು ಕಾರ್ಯಚರಣೆಯನ್ನು ಮುಂದುವರೆಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರಿಗೆ ವಿವರಿಸಿದ್ದಾರೆಂದು ತಿಳಿದು ಬಂದಿದೆ. ಕೇಂದ್ರವು ಎಲ್ಲ ರೀತಿಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸೇನಾ ಹೆಲಿಕಾಪ್ಟರ್‌ಗಳನ್ನು ಸೇವೆಗೆ ಬಳಸಲಾಗುತ್ತಿದ್ದು ಕಾರ್ಯಚರಣೆ ಮುಂದುವರೆದಿದೆ.

ಪರಿಸ್ಥಿತಿ ಹತೋಟಿಯಲ್ಲಿದ್ದು ಮಳೆ ಇನ್ನೂ ಮುಂದುವರಿದಿದೆ. ಅಪಾಯದ ಮಟ್ಟವನ್ನು ಗಮನಿಸಿದರೆ, ಪ್ರದೇಶ ಜಲಾವೃತವಾಗಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ಸಹಜ ಸ್ಥಿತಿಯಲ್ಲಿದ್ದು, ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದರೆ, ನಾಳೆ ಯಾತ್ರೆಯನ್ನು ಪುನರಾರಂಭಿಸಬಹುದು” ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಥವಾ ITBP ವಕ್ತಾರರು ಹೇಳಿದ್ದಾರೆ.

ಮೇಲ್ಭಾಗದಲ್ಲಿ ಭಾರೀ ಮಳೆಯಾದ ನಂತರ ಗುಹೆಯ ಮೇಲಿನಿಂದ ಮತ್ತು ಬದಿಗಳಿಂದ ನೀರು ಬಂದಿದೆ. ನೀರಿನ ರಬಸದ ತೀವ್ರತೆಗೆ ಅನೇಕ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುತ್ತಿದೆ.

ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಯಾತ್ರೆಯನ್ನು ಈ ವಾರದ ಆರಂಭದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 2 ವರ್ಷಗಳ ಕೋವಿಡ್ ಅಂತರದ ನಂತರ ಈ ವರ್ಷ ಜೂನ್ 30 ರಂದು ತೀರ್ಥಯಾತ್ರೆ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇಗುಲದಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: