ಗೋಕಾಕ ಫಾಲ್ಸ್ (Gokak Falls) ಸೇರಿ ವಿವಿಧ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಪ್ರವಾಹದ ಆತಂಕ,

ಜಿಲ್ಲೆ ಸಪ್ತನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವು ದಿನೇ ದಿನೇ ಹೆಚ್ಚಳವಾಗುತ್ತಿದೆ.ಅದರಲ್ಲೂ ಕಳೆದ ಒಂದು ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 257.83 ಸೆಂಟಿಮೀಟರ್ ಮಳೆಯಾಗಿದೆ. ಇದರಲ್ಲಿ ಖಾನಾಪುರ ತಾಲೂಕಿನಲ್ಲಿ 75.6 ಸೆಂಟಿಮೀಟರ್, ಬೆಳಗಾವಿ ತಾಲೂಕಿನಲ್ಲಿ 45.5 ಸೆಂಟಿಮೀಟರ್ ನಷ್ಟು ಮಳೆಯಾಗಿದೆ.
ಇನ್ನೂ ಹಿಡಕಲ್ ರಾಜಾ ಲಖಮಗೌಡ ಜಲಾಶಯ ಮತ್ತು ಸವದತ್ತಿ ನವೀಲುತೀರ್ಥ ರೇಣುಕಾಸಾಗರ ಜಲಾಶಯ ಒಳ ಹರಿಯುವು ಹೆಚ್ಚಾಗಿದೆ. ಹೀಗಾಗಿ ಸಪ್ತ ನದಿಗಳ ಪಾತ್ರದ ಜನರಲ್ಲಿಗ ಪ್ರವಾಹದ ಭೀತಿ ಎದುರಾಗಲಿದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯ ಪ್ರಭಾವದಿಂದಕೃಷ್ಣಾ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮೂರು ಸೇತುವೆ ಮುಳುಗಡೆ
ಇದರಿಂದ ಚಿಕ್ಕೋಡಿ ತಾಲೂಕಿನ ಯಡೂರು _ ಕಲ್ಲೋಳ ಹಳೆ ಸೇತುವೆ, ಮಲಿಕವಾಡ _ ದತ್ತವಾಡ, ಕಾರದಗಾ _ ಭೋಜ ಸೇರಿ ಮೂರು ಸೇತುವೆ ಮುಳುಗಡೆಯಾಗಿವೆ..ಇಲ್ಲಿ ಜನರ ಸಂಚಾರ ಮಾಡದಂತೆ ಪೊಲೀಸ್ ಇಲಾಖೆಯಿಂದ ಬ್ಯಾರಿಕೆಟ್ ಅಳವಡಿಸಲಾಗಿದೆ. ಕೃಷ್ಣಾ ನದಿ ತೀರದಲ್ಲಿ ಎನ.ಡಿ.ಆರ್.ಎಫ ತಂಡವು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿ ನಿಂತಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆ ಹಿನ್ನೆಲೆ ಮೈದುಂಬಿ ಧುಮ್ಮುಕ್ಕುತ್ತಿವೆ ಬೆಳಗಾವಿಗೆ ಸಮೀಪ ಇರುವ ಜಲಪಾತಗಳಿವು.ಕರ್ನಾಟಕ ಗೋವಾ ಗಡಿಯ ಪಶ್ಚಿಮ ಘಟ್ಟದಲ್ಲಿರುವ ಧೂದ್‌ಸಾಗರ್, ಶಿಂಭೋಲಾ, ಸಡಾ ಫಾಲ್ಸ್ ಹಾಗೂ ಗೋಕಾಕ ಫಾಲ್ಸ ಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿವೆ.
ಸರ್ಕಾರದ ವಿರುದ್ಧ ಕಿಡಿ
ಈ ಮಧ್ಯೆ ಸಿಎಂ ಬೊಮ್ಮಾಯಿಂದ ಪ್ರವಾಹ ಭೀತಿ ಇರುವ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಅತ್ತ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದು, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಧಿಕಾರಕ್ಕಾಗಿ ಇವರು ಕಿತ್ತಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದೊರೆದಿದೆ.. ದಿನೇ ದಿನೇ ಸಪ್ತ ನದಿಗಳ ಒಳ ಹರಿವು ಹೆಚ್ಚಳವಾಗುತ್ತಿರುವುದು ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಮನೆ ಮಾಡಿದೆ. ಇನ್ನೂ ಮೂರ್ನಾಲ್ಕು ದಿನ ಮರಣನ ಅಬ್ಬರ ಮುಂದುವರೆಯಲಿದೆ. ಬೆಳಗಾವಿ ಜಿಲ್ಲಾಡಳಿತ ನೀಡುವ ಸೂಚನೆಯನ್ನು ನದಿ ಪಾತ್ರದ ಜನ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.