Karnataka News
ಬೆಳಗಾವಿ : ಕುಂದಾನಗರಿಯಲ್ಲಿ ಮಳೆ ಆರ್ಭಟ : ಸಾರ್ವಜನಿಕರು ಪರದಾಟ

ಬೆಳಗಾವಿ : ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಒಂದೇ ತಿಂಗಳಲ್ಲಿ 12 ಜನ ಸಾವನ್ನಪ್ಪಿದ್ದಾರೆ. ಗಡಿ ಜಿಲ್ಲೆಯ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯಲ್ಲಿ ನಗರದಲ್ಲಿ ಮಳೆಯ ಆರ್ಬಟ ಜೋರಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನಗರದ ಆರ್ ಪಿಡಿ ವೃತ್ತದಲ್ಲಿ ಬಳಿ ಮಳೆ ನೀರು ರಸ್ತೆಯಲ್ಲಿ ಪಕ್ಕದಲ್ಲಿರುವ ಗುಂಡಿಗೆ ಹರಿದು ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಂಕಷ್ಟ ಹೇಳತೀರದಾಗಿದೆ.
ನಿರಂತರ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ನಗರದ ರಸ್ತೆಗಳ ಮೇಲೆ ನೀರು ನಿಂತು ಅವಾಂತರ ಸೃಷ್ಟಿಸಿದೆ.ಆರ್ ಪಿಡಿ ವೃತ್ತದ ಬಳಿಯ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅದರಲ್ಲಿ ನೀರಿನಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದುಕೊಂಡು ಹೋಗಲು ಹರಸಾಹಸ ಪಡುತ್ತಿದ್ದಾರೆ.