fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
All Categories AdvertisementEntertainmentFeature articlesLatestNational

WhatsApp New Feature: ವಾಟ್ಸ್​ಆಯಪ್​ ಆನ್​ಲೈನ್ ಸ್ಟೇಟಸ್​​ನಲ್ಲಿ ಮಹತ್ವದ ಬದಲಾವಣೆ: ಬರುತ್ತಿದೆ ಹೊಸ ಫೀಚರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
WhatsApp New Feature: ಇದೀಗ ವಾಟ್ಸ್​ಆ್ಯಪ್​ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಹೌದು ವಾಟ್ಸ್​ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ.

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ವಾಟ್ಸ್​ಆ್ಯಪ್​ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಹೌದು ವಾಟ್ಸ್​ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್‌ ಸ್ಟೇಟಸ್‌ (Online Status) ಹೈಡ್‌ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅಂದರೆ ನಿಮಗೆ ಬೇಡ ಎನಿಸುವ ಜನರನ್ನು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಹೈಡ್‌ ಮಾಡುವ ಆಯ್ಕೆ ಇದಾಗಿದೆ. ಇದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ.

ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯುತ್ತದೆ. ಆದರೆ ಈ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು ಆದಷ್ಟು ಬೇಗ ಬಳಕೆದಾರರಿಗೆ ಸಿಗಲಿದೆಯಂತೆ.

 

ಇನ್ನು ವಾಟ್ಸ್​ಆ್ಯಪ್​ನಲ್ಲಿ ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ಹೊಸ ಆಯ್ಕೆ ಸದ್ಯದಲ್ಲೇ ಸಿಗಲಿದೆ. ಅದೇನೆಂದರೆ ವಾಟ್ಸ್​ಆ್ಯಪ್​ ಡಿಲಿಟ್‌ ಫಾರ್‌ ಎವರಿಒನ್‌ ಫೀಚರ್​ನ ಲಿಮಿಟ್‌ ಅನ್ನು ಹೆಚ್ಚಿಸಲಾಗಿದೆ. ಅಂದರೆ ಮಾಡಿದ ಮೆಸೇಜ್ ಅನ್ನು ಯಾರಿಗೂ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗಿದೆ.

ಪ್ರಸ್ತುತ ವಾಟ್ಸ್​ಆ್ಯಪ್​​ ಬಳಕೆದಾರರು ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ತಾವು ಸೆಂಡ್‌ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್‌ ಮಾಡಬಹುದು. ಇದೀಗ ಇದರ ಟೈಂ ಲಿಮಿಟ್‌ ಅನ್ನು ಹೆಚ್ಚಿಸಲಾಗಿದೆ. ಮೆಟಾ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಿಸಲು ಮುಂದಾಗಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್‌ ಫಾರ್‌ ಎವರಿಒನ್‌ ಬಳಸಿ ಡಿಲೀಟ್‌ ಮಾಡಬಹುದಾಗಿದೆ.

ಸದ್ಯಕ್ಕೆ ಈ ಹೊಸ ಫೀಚರ್ ವಾಟ್ಸ್​ಆ್ಯಪ್​ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಆಯ್ದ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಅದರಂತೆ ಈ ಫೀಚರ್ಸ್‌ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲು ಪ್ಲಾನ್‌ ಮಾಡಿದೆ. ಆದಷ್ಟು ಬೇಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: