ಬಕ್ರೀದ್: 30 ಲಕ್ಷಕ್ಕೆ ಮಾರಾಟವಾದ ಅಪರೂಪ ತಳಿಯ ಮೇಕೆ!

ಬಕ್ರೀದ್ ಹಬ್ಬದ ಪ್ರಯುಕ್ತ ಕುರಿ-ಮೇಕೆಗಳ ಮಾರಾಟ ದೇಶಾದ್ಯಂತ ಭರ್ಜರಿಯಾಗಿ ನಡೆದಿದ್ದು, ಉತ್ತರ ಪ್ರದೇಶದ ಮೀನಾ ಬಜಾರ್ ನಲ್ಲಿ ಅಪರೂಪದ ತಳಿಯ ಮೇಕೆಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿ ಸುದ್ದಿ ಮಾಡಿವೆ.
ದೆಹಲಿಯ ಪ್ರಸಿದ್ದ ಮಾರುಕಟ್ಟೆ ಸ್ಥಳವಾದ ಮೀನಾ ಬಜಾರ್ ನಲ್ಲಿ ಅಪರೂಪದ ತಳಿಯ ಒಂದು ಮೇಕೆ 30 ಲಕ್ಷಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ.
ಎರಡು ಮೇಕೆಗಳು ತಮ್ಮ ಹೆಸರಿನಿಂದಲೇ ತಲಾ 15 ಲಕ್ಷ ರೂ.ಗೆ ಮಾರಾಟವಾಗಿ ಗಮನ ಸೆಳೆದಿವೆ.
೩೫ ವರ್ಷ ಉತ್ತರಪ್ರದೇಶ ಮೂಲದ ಬುಲಂದರ್ ಶಹದ ಗುಡ್ಡು ಖಾನ್ ಅವರ ಒಂದು ವರ್ಷ ವಯಸ್ಸಿನ ಎಂಬ ಹೆಸರಿ ಆಡು 30 ಲಕ್ಷ ರೂ.ಗೆ ಮಾರಾಟವಾದರೆ, ಮುಹಮ್ಮದ್ ಮತ್ತು ಅಲ್ಲಾ ಹೆಸರಿನ ಎರಡು ಆಡುಗಳು ತಲಾ 15 ಲಕ್ಷಕ್ಕೆ ಮಾರಾಟವಾಗಿವೆ. ಈ ಎರಡೂ ಮೇಕೆಗಳು ಹೆಸರಿನಿಂದಾಗಿಯೇ ಗಮನ ಸೆಳೆದಿದ್ದು, ಮುಸ್ಲಿಮರ ಪಾಲಿಗೆ ಈ ಹೆಸರು ಅತ್ಯಂತ ಪವಿತ್ರವಾಗಿದೆ.
ನಾವು ಆಡುಗಳನ್ನ ಕಳೆದ ಒಂದು ವರ್ಷದಿಂದ ಪೌಷ್ಠಿಕ ಆಹಾರಗಳನ್ನು ಚೆನ್ನಾಗಿ ನೀಡಿದ್ದೇವೆ ನಮಗೆ ನಂಬಿಕೆಯಿತ್ತು ನಮ್ಮ ತಳಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಎಂದು. ಈ ಮೇಕೆಗಳಿಗೆ ನಿಜಕ್ಕೂ ಬೆಲೆ ಕಟ್ಟಲಾಗದು ಎಂದು ಗುಡ್ಡು ಪ್ರತಿಕ್ರಿಯಿಸಿದ್ದಾರೆ.
ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ಕೇಳಿದಾಗ ಆಡುಗಳ ತೂಕ, ನೋಟ, ಎತ್ತರವನ್ನು ಗಮನಿಸಲಾಗುತ್ತದೆ. ನಕ್ಷತ್ರ ಅಥವಾ ಅರ್ಧ ಚಂದ್ರದ ಗುರುತು ಕಂಡು ಬಂದರೆ ಅವುಗಳ ಬೆಲೆ ಏಕಾಏಕಿ ಗಗನಕ್ಕೇರುತ್ತದೆ ಮತ್ತು ಅಂತಹ ಆಡುಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.