Karnataka NewsScience
ವಿಜಯಪುರ ಭೂಕಂಪನಕ್ಕೆ 48 ಮನೆಗಳಿಗೆ ಹಾನಿ

ವಿಜಯಪುರ : ಶನಿವಾರ ಸಂಭವಿಸಿದ ಭೂಕಂಪಕ್ಕೆ ವಿಜಯಪುರ ಜಿಲ್ಲೆಯಲ್ಲಿ 48 ಮನೆಗಳಿಗೆ ಹಾನಿಯಾಗಿದೆ. ಮತ್ತೊಂದೆಡೆ ತುಂಬಿದ್ದ ಬಾವಿ ಯೊಂದರ ನೀರು ಬತ್ತಿ ಬಾವಿ ಬರಿದಾದ ಘಟನೆ ಸಂಭವಿಸಿದೆ.
ಭೂಕಂಪದ ಬಳಿಕ ಜಿಲ್ಲಾಧಿಕಾರಿ ವಿ.ಬಿ.ದಾನಮ್ಮನವರ ಸೂಚನೆ ಮೇರೆಗೆ ಕಂದಾಯ ಇಲಾಖೆ ಸಮೀಕ್ಷೆಯಲ್ಲಿ ತೊಡಗಿದೆ.
ಪರಿಣಾಮ ವಿವಿಧ ರೀತಿಯ ಹಾನಿಯ ವರದಿಗಳು ಬಯಲಾಗುತ್ತಿವೆ.
ತಿಕೋಟಾ ತಹಶಿಲ್ದಾರರ ಎಸ್.ಎಂ.ಅರಕೇರಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅರಕೇರಿ, ಗ್ರಾ.ಪಂ. ಕಟ್ಟಡ, ಅರಕೇರಿ ಸುತ್ತಲಿನ ವಿವಿಧ ತಾಂಡಾಗಳು, ಮಜರೆ ಗ್ರಾಮಗಳ 48 ಮನೆಗಳ ಗೋಡೆಗಳು ಕುಸಿದಯ, ಹಾನಿಯಾಗಿವೆ.
ಮತ್ತೊಂದೆಡೆ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ತುಂಬಿಕೊಂಡಿದ್ದ ಬಾವಿಯೊಂದರ ನೀರು, ಭೂಕಂಪದ ಬಳಿಕ ಸಂಪೂರ್ಣ ಇಂಗಿ, ಬಾವಿ ಬತ್ತಿ ಬರಿದಾಗಿದೆ.
ಇಂಡಿ ತಹಶಿಲ್ದಾರ ನಾಗಯ್ಯ ಹಿರೇಮಠ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸಿ, ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.