ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಹೆಸ್ಕಾಂ ಇವರಿಂದ.. ಕರ್ನಾಟಕ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಖಾಯಮತಿಗಾಗಿ ಪ್ರತಿಭಟನೆ

ಮೂಡಲಗಿ:- ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಹೆಸ್ಕಾಂ ಇವರಿಂದ..
ಕರ್ನಾಟಕ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಖಾಯಮತಿಗಾಗಿ ಪ್ರತಿಭಟನೆ ಜರುಗಿತು.. ಈ ಪ್ರತಿ ಭಟನೆಯಲ್ಲಿ ಹಲವು ಜಿಲ್ಲೆಗಳಿಂದ ಆಗಮಿಸಿದ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಆಗಮಿಸಿ, ರಾಜ್ಯ ಮಾನವ ಹಕ್ಕುಗಳ ಹೊರಾಟ ಗಾರರಾದ ಶ್ರೀ ಭಿಮಪ್ಪ ಗಡಾದ ಅವರ ಕಛೇರಿಗೆ ತೆರಳಿ ತಮ್ಮ ನೋವುಗಳನ್ನ ತೊಡಿಕೊಂಡು ಮನವಿ ಸಲ್ಲಿಸಿದರು..
ಸಾಕಷ್ಟು ವರ್ಷಗಳು ಕಳೆದರು ಸರ್ಕಾರದ ಯಾವುದೇ ಸವಲತ್ತುಗಳಿಲ್ಲದೆ ಪರದಾಟುವಂತಾಗಿದೆ, ಸವಲತ್ತು ಪಡೆಯಲು ನಾನಾ ರೀತಿಯ ಹೋರಾಟ ಮಾಡುತ್ತಾ ಬಂದರು ಸರ್ಕಾರ ಯಾವುದಕ್ಕೂ ಜಗ್ಗುತ್ತಿಲ್ಲ, ಅವರ ಮೇಲಾಧಿಕಾರಿಗಳ ಆದೇಶದಂತೆ, ರಜೆ ಪಡೆದು ಕೊಳ್ಳದೆ ಮಳೆ- ಬಿಸಿಲ್ಲನ್ನದೆ ನೂರಾರು ಮನೆಸುತ್ತಿ ಬಿಲ್ಲ್ ಕಲೆಕ್ಟ್ ಮಾಡುತ್ತಾ ಜೀವನ ನಿರ್ವಹಿಸುತ್ತಾ ಬಂದಿದ್ದಾರೆ, ಇವರ ಮಾಸಿಕ ಸಂಭಳ 12000/- ಇದ್ದು. ಅದು-ಇದು ಕಟ್ಟಗಿ 10000/- ಕೈ ಸೇರುತ್ತೆ. ಇದರಲ್ಲಿ ಪ್ರಯಾಣ ಭತ್ತ್ಯೆಯು ಇವರೆ ಬರಿಸುತ್ತಿದ್ದು, ದುಭಾರಿ ದುನಿಯಾದಲ್ಲಿ ಬದಕೋದು ಕಷ್ಟವೇನಿಸಿದರು, ಸಾಕಷ್ಟು ವರ್ಷಗಳಿಂದ ನಿರ್ವಹಿಸುತ್ತಾ ಬಂದ ಕೇಲಸ ಎಲ್ಲಿ ಕೈಯ ತಪ್ಪುವುದೋ ಎಂಬ ಭಯದಲ್ಲಿ ಇಂದಲ್ಲ ನಾಳೆ ಸರ್ಕಾರ,ನಮ್ಮ ಮೇಲೆ ಕರುಣೆತೋರಿ ನಮ್ಮನ್ನು ಖಾಯಂಗೋಳಿಸ ಬಹುದೇನೋ ಎಂದು, 3500 ಕ್ಕೂ ಹೆಚ್ಚಿನ ಗ್ರಾಮ ವಿದ್ಯುತ್ ಪ್ರತಿನಿಧಿಗಳಲ್ಲದೆ ಅವರ ಕುಟುಂಬವೂ ಸರ್ಕಾರದ ಕಡೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ..
ಈ ಹಿಂದೆ ಕೊರೊನಾ ಇದ್ದರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೇಲವು ಜನ ಸಾವನ್ನಪ್ಪಿದರು ಅವರ ಕುಟುಂಬಗಳಿಗೆ ಯಾವುದೇ ರೀತಿಯ ಸರ್ಕಾರ ಸ್ಪಂದಿಸದೆ ಇದ್ದಿದ್ದು. ಹಂತಹ ಕೆಲವು ಕುಟುಂಬಗಳಿಗೆ ಸಹೋದ್ಯೋಗಿಗಳೇ ಸಹಾಯಮಾಡಿದ್ದುಂಟು., ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕಷ್ಟ ಮತ್ಯಾವ ಹುದ್ದೆಯಲಿಲ್ಲ ಎಂದು ತಮ್ಮ ಅಳಲನ್ನು ರಾಜ್ಯ ಮಾನವ ಹಕ್ಕುಗಳ ಹೊರಾಟ ಗಾರರಾದ ಶ್ರೀ ಭಿಮಪ್ಪ ಗಡಾದ ಅವರ ಹತ್ತಿರ ತೋಡಿಕೊಂಡರು. ನಂತರ ಮಾತನಾಡಿದ ಅವರು ನಾವು ನಿಮ್ಮ ತೊಂದರೆಗಳಿಗೆ ನಾವು ಸ್ಪಂದಿಸುತ್ತೆವೆ ಮತ್ತು ಸದಾ ನಿಮ್ಮ ಜೊತೆಗೆ ನಾವು ಇರುತ್ತೆವೆ, ಹಾಗೆ ಮುಂದಿನ ದಿನಮಾನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೊರಾಟ ಮಾಡಬೇಕಾಬಹುದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಭಾಗವಹಿಸಬೇಕು ಎಂದು ಕರೆ ನೀಡಿದರು..
ಈ ಸಭೆಯಲ್ಲಿ ಸ್ಥಳೀಯ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಭಾಗವಹಿಸಿದ್ದರು….
ವರದಿ:-ಸಂಜಯ್ ಎಸ್ ಬಾರ್ಕಿ