ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್; ಯಾವ ಕೇಸ್ ಇದು?
40 ಮಿಲಿಯನ್ ಡಾಲರ್ ವರ್ಗಾಯಿಸಿದ್ದ ವಿಜಯ್ ಮಲ್ಯ

ಯಾವ ಪ್ರಕರಣ ಇದು?
2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇಂದು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಬೇಕಿತ್ತು. ಎಸ್‌ಬಿಎಂ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ಪ್ರಕಟಿಸಿದೆ. ಇಂಗ್ಲೆಂಡ್ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಅಲ್ಲದೇ ಕೋರ್ಟ್ ಎದುರು ಸಹ ಹಾಜರಾಗಿರಲಿಲ್ಲ. ವಿಜಯ್ ಮಲ್ಯ ಪರ ವಕೀಲರು ಸಹ ಈ ವಿಷಯವನ್ನು ಕೋರ್ಟ್ ಗಮನಕ್ಕೆ ತಂದ ನಂತರ ಈ ಆದೇಶ ಪ್ರಕಟಿಸಲಾಗಿದೆ.
40 ಮಿಲಿಯನ್ ಡಾಲರ್ ವರ್ಗಾಯಿಸಿದ್ದ ವಿಜಯ್ ಮಲ್ಯ
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ 2017ರಲ್ಲಿ ದೇಶ ಬಿಟ್ಟು ಹೋಗಿದ್ದ ಉದ್ಯಮಿ ವಿಜಯ್ ಮಲ್ಯ ನಂತರ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣದಲ್ಲಿ ವಿಜಯ್ ಮಲ್ಯ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೆ ಇಂದು ಸುಪ್ರೀಂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸದ ಉದ್ಯಮಿ
‘ ಉದ್ಯಮಿ ವಿಜಯ್ ಮಲ್ಯ ತಮ್ಮ ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸಲಿಲ್ಲ. ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ. ಕಾನೂನಿನ ಘನತೆ ಎತ್ತಿಹಿಡಿಯಲು ಅವರಿಗೆ ಶಿಕ್ಷೆ ವಿಧಿಸಬೇಕು’ ಎಂದು ಬ್ಯಾಂಕ್ ಒಕ್ಕೂಟದ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಬ್ಯಾಂಕ್ ಒಕ್ಕೂಟದ ವಾದ ಪುರಸ್ಕರಿಸಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
8% ಬಡ್ಡಿಯಂತೆ 40 ಮಿಲಿಯನ್ ಯುಎಸ್ ಡಾಲರ್ ಪಾವತಿಸಲು ಸೂಚನೆ
ಬ್ಯಾಂಕುಗಳಿಗೆ 40 ಮಿಲಿಯನ್ ಡಾಲರ್ ನೀಡುವಂತೆ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 40 ಮಿಲಿಯನ್ ಯುಎಸ್ ಡಾಲರ್ ಗೆ 8% ಬಡ್ಡಿ ನೀಡಲು ಸೂಚನೆ ನೀಡಿದೆ. ಹಣ ನೀಡಲು ವಿಜಯ್ ಮಲ್ಯಗೆ 4 ವಾರಗಳ ಕಾಲಾವಕಾಶ ನೀಡಿರುವ ದೇಶದ ಸರ್ವೋಚ್ಛ ನ್ಯಾಯಾಲಯ ಹಣ ನೀಡದಿದ್ದರೆ ಆಸ್ತಿಗಳ ಅಟ್ಯಾಚ್ಮೆಂಟ್ ಮಾಡುವುದಾಗಿ ಎಚ್ಚರಿಕೆಯನ್ನು ಸಹ ಉದ್ಯಮಿ ವಿಜಯ್ ಮಲ್ಯಗೆ ವಿಧಿಸಿದೆ.