ಬೆಳಗಾವಿಯ ಉದ್ಯಮಬಾಗ್ ಪರಿಸರದಲ್ಲಿನ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಸುಮಾರು 60 ಕೋಟಿ ರೂ ಬಿಡುಗಡೆ ಶಾಸಕ ಅಭಯ್ ಪಾಟೀಲ್
ಜನೇವರಿ 26ರ ಒಳಗಾಗಿ ಕಾಮಗಾರಿ ಪೂರ್ಣ

ಬೆಳಗಾವಿಯ ಉದ್ಯಮಬಾಗ್ ಪರಿಸರದಲ್ಲಿನ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಸುಮಾರು 60 ಕೋಟಿ ರೂ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ 5ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಿದ್ದು, ಇನ್ನುಳಿದ ಎಲ್ಲಾ ಕಾಮಗಾರಿಗಳನ್ನು ಜನೇವರಿ 26ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ವೀಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶಾಸಕ ಅಭಯ್ ಪಾಟೀಲ್, ಬೆಳಗಾವಿ ನಗರದ ಉದ್ಯಮಬಾಗ್ ಪರಿಸರದಲ್ಲಿನ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ 60 ಕೋಟಿ ರೂ ಕಾಮಗಾರಿಗೆ ಯೋಜನೆಯನ್ನು ಮಾಡಲಾಗಿದ್ದು ಈಗಾಗಲೇ 60ಕೋಟಿ ರೂ ಮಂಜೂರು ಮಾಡಿಸಲಾಗಿದೆ. ಇದರಲ್ಲಿ ಈಗಾಗಲೇ ಫೌಂಡ್ರಿ ಕ್ಲಸ್ಟರ್ ಬಳಿ 5 ಕೋಟಿ ರೂ ವೆಚ್ಚದಲ್ಲಿ ಸಿಮೆಂಟ್ ರಸ್ತೆಯನ್ನು ಮಾಡಲಾಗಿದೆ.
ಇನ್ನುಳಿದ ಕಡೆಗಳಲ್ಲಿಯೂ ಕೂಡ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯನ್ನು ಮುಂದಿನ ವಾರವೇ ಪ್ರಾರಂಭಿಸಲಾಗುವುದು. ಇನ್ನು ಜನೇವರಿ 26ರ ಒಳಗಾಗಿ ಅವುಗಳನ್ನು ಪೂರ್ಣಗೊಳಿಸಲಾಗುವುದುಎಂದರು.