ಮುಂದುವರಿದ ಮಳೆ, ಪ್ರವಾಹದ ಆತಂಕ, ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ

ಜಿಲ್ಲಾವಾರು ಹವಾಮಾನ ವರದಿ: (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 25-19, ಮೈಸೂರು 26-20, ಚಾಮರಾಜನಗರ 26-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 25-19, ಚಿಕ್ಕಬಳ್ಳಾಪುರ 24-18, ಕೋಲಾರ 27-21, ಹಾಸನ 22-18, ಚಿಕ್ಕಮಗಳೂರು 21-18, ದಾವಣಗೆರೆ 24-21, ಶಿವಮೊಗ್ಗ 24-21, ಕೊಡಗು 21-18, ಚಿತ್ರದುರ್ಗ: 24-21
ತುಮಕೂರು 25-20, ಉಡುಪಿ 27-25, ಮಂಗಳೂರು 27-25, ಉತ್ತರ ಕನ್ನಡ 27-25, ಧಾರವಾಡ 27-20, ಹಾವೇರಿ 24-21, ಹುಬ್ಬಳ್ಳಿ 27-21, ಬೆಳಗಾವಿ 22-19, ಗದಗ 24-21, ಕೊಪ್ಪಳ 25-22, ವಿಜಯಪುರ 23-21, ಬಾಗಲಕೋಟ 24-22 , ಕಲಬುರಗಿ 24 22, ಬೀದರ್ 25-20,. ಯಾದಗಿರಿ 25-22, ರಾಯಚೂರ 27-21 ಮತ್ತು ಬಳ್ಳಾರಿ 26-22
ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿಯೂ ಗಾಳಿಯ ವೇಗ ಹೆಚ್ಚಾಗಿದ್ದು, ಚಳಿಯ ಪ್ರಮಾಣ ಏರಿಕೆಯಾಗಿದೆ. ಮಳೆ, ಗಾಳಿ, ಚಳಿ ಏರಿಕೆಯಾದ ಪರಿಣಾಮ ಜನರಲ್ಲಿ ಶೀತ ಸಂಬಂಧಿತ ಲಕ್ಷಣಗಳು ಕಂಡು ಬರುತ್ತಿವೆ.
ನೆರೆಯ ಮಹಾರಾಷ್ಟ್ರದಲ್ಲಿ ಮಳೆ
ಮಹಾರಾಷ್ಟ್ರದಲ್ಲಿ (Maharashtra) ಭಾರಿ ಪ್ರಮಾಣದ ಮಳೆಯಾಗುತ್ತಿರುವ (Rain) ಪರಿಣಾಮ ಮಹಾರಾಷ್ಟ್ರದ ಮಹಾಮಳೆಗೆ ಯಾದಗಿರಿ (Yadagiri) ಜಿಲ್ಲೆಯ ಕೃಷ್ಣಾ (Krishna) ಹಾಗೂ ಭೀಮಾನದಿ (Bhima River) ತೀರದಲ್ಲಿ ಪ್ರವಾಹ (Flood) ಭೀತಿ ಎದುರಾಗಿದೆ.
ಬಸವಸಾಗರ ಜಲಾಶಯ ಭರ್ತಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯ (Narayanapur Dam) ಈಗ ಭರ್ತಿಯಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 28.820 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 75 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ
ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಡಂಗೂರು ಸಾರಿ ಯಾವುದೇ ಕಾರಣಕ್ಕು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ತಿಂಥಣಿ, ರೊಟ್ನಡಗಿ, ನಾರಾಯಣಪುರ ಸೇರಿದಂತೆ ಮೊದಲಾದ ಕಡೆ ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತ ಕೂಡ ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಕೂಡ ಅಗತ್ಯ ಮುಂಜಾಗ್ರತೆ ವಹಿಸಿದೆ.
ಕೊಡಗಿನ ಕುಶಾಲನಗರದಲ್ಲಿ ಪ್ರವಾಹದ ಆತಂಕ
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕೆರೆ, ಹೊಳೆ ಮತ್ತು ನದಿಗಳು ತುಂಬಿ ಹರಿಯುತ್ತಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗಮಂಡಲ ಸುತ್ತಮುತ್ತಲ ಭಾಗದಲ್ಲಿ ಮಳೆ ತೀವ್ರಗೊಂಡಂತೆಲ್ಲಾ ಕುಶಾಲನಗರದಲ್ಲಿ ಆತಂಕ ಹೆಚ್ಚುತ್ತಿದೆ.
ಪಟ್ಟಣದ ಸಾಯಿ, ಕುವೆಂಪು ಮತ್ತು ಶೈಲಜಾ ಬಡಾವಣೆಗಳಲ್ಲಿ ಕಾವೇರಿ ನದಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.
ಬೆಳಗಾವಿ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಹನ್ನೆಲೆ ಬೆಳಗಾವಿ ತಾಲೂಕಿನ ಬಳ್ಳಾರಿ ನಾಲಾಗೆ ಒಳಹರಿವು ಹೆಚ್ಚಳವಾಗಿದೆ. ನೀರು ನಾಲಾ ವ್ಯಾಪ್ತಿ ಮೀರಿ ಹರಿಯುತ್ತಿದ್ದು, ರೈತರ ಜಮೀನಿಗಳಿಗೆ ನೀರು ನುಗ್ಗಿದ ಪರಿಣಾಮಬಿತ್ತನೆ ಮಾಡಿದ ನೂರಾರು ಎಕರೆ ಭತ್ತ ಜಲಾವೃತಗೊಂಡಿದೆ.
ಬಳ್ಳಾರಿ ವ್ಯಾಪ್ತಿಗೆ ಬರುವ ಯಳ್ಳೂರು, ಧಾಮಣೆ, ವಡಗಾಂವ, ಹಲಗಾ ,ಹಳೇ ಬೆಳಗಾವಿ ಆನಗೋಳ ರೈತರ ಕಂಗಾಲು ಆಗಿದ್ದಾರೆ. ಭಾಸೂಮತಿ, ಇಂದ್ರಾಣಿ, ಸಾಯಿರಾಮ್, ಸೋನಾಮಸೂರಿ, ಅಮನ್ ಸೇರಿ 16ಕ್ಕೂ ಹೆಚ್ಚು ವಿವಿಧ ತಳಿಯ ಭತ್ತ ಜಲಾವೃತವಾಗಿದೆ.