Karnataka NewsNational
Trending
ಭಾರತದಲ್ಲೇ ದುಬಾರಿ ಫ್ಲ್ಯಾಟ್ ಖರೀದಿಸಿದ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್! ಬೆಲೆ ಕೇಳಿದರೆ ಬೆಚ್ಚಿ ಬೀಳ್ತಿರ!

ಬಾಲಿವುಡ್ ಸೆಲೆಬ್ರೆಟಿ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್ ನಟರಾದ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಮನೆ ಪಕ್ಕದಲ್ಲೇ 119 ಕೋಟಿ ರೂ.
ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿನ ಸಾಗರ್ ರೇಷಮ್ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ದೀಪಿಕಾ- ರಣವೀರ್ ದಂಪತಿ 119 ಕೋಟಿ ರೂ. ನೀಡಿ ಫ್ಲ್ಯಾಟ್ ಖರೀದಿಸಿದ್ದು, ಶೀಘ್ರದಲ್ಲೇ ಮನೆಯ ಗೃಹ ಪ್ರವೇಶ ಮಾಡಲಿದ್ದಾರೆ.
ಭಾರತದಲ್ಲೇ ವಸತಿ ಸಮುಚ್ಛಯದಲ್ಲಿ ಖರೀದಿಸಲಾದ ಅತ್ಯಂತ ದುಬಾರಿ ಫ್ಲ್ಯಾಟ್ ಇದಾಗಿದೆ. ಇದು ಶಾರೂಖ್ ಖಾನ್ ಅವರ ಮನ್ನತ್ ಮತ್ತು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಗಳ ನಡುವೆ ಇದೆ.
ಅಪಾರ್ಟ್ ಮೆಂಟ್ ನ 16,17,18 ಮತ್ತು 19ನೇ ಮಹಡಿ ಇದಾಗಿದ್ದು, 11,266 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಮತ್ತು 1300 ಚದರ ಅಡಿ ಟೆರೆಸ್ ಹೊಂದಿದೆ.