Crime NewsKarnataka News
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಇಂದು ಹಂತಕರು ಕೋರ್ಟ್‌ಗೆ ಹಾಜರು

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಂತಕರನ್ನ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಹಂತಕರು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಇವತ್ತು ಮತ್ತೆ ಹಂತಕರನ್ನ ಮೂರು ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಖಾಕಿ ಪಡೆಯಿಂದ ಆರು ದಿನಗಳ ಕಾಲ ಎಲ್ಲಾ ಮಗ್ಗಲುಗಳಿಂದ ವಿಚಾರಣೆ ನಡೆಯಲಿದೆ.
ಹಂತಕರು ಎಷ್ಟೇ ವಿಚಾರಣೆ ಮಾಡಿದ್ರು ಹತ್ಯೆಗೆ ಪ್ರಮುಖ ಕಾರಣ ಏನು ಎಂಬುದರ ಬಗ್ಗೆ ತುಟಿ ಬಿಚ್ಚಿಲ್ಲ.
ಇದರಿಂದ ವಿಚಾರಣೆ ಮಾಡಲು ಪೊಲೀಸರು ಸುಸ್ತಾಗಿದ್ದರು. ಆದ್ದರಿಂದ ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಕಸ್ಟಡಿಗೆ ಕೊಡಿ ಎಂದು ಪೊಲೀಸರು ಕೇಳಲಿದ್ದಾರೆ.