Karnataka News
ರಜೆಗೆಂದು ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಬೆಳಗಾವಿ: ಸಮೀಪದ ರಾಕಸಕೊಪ್ಪ-ಬೆಳಗುಂದಿ ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ಯೋಧನೋರ್ವ ಮೃತಪಟ್ಟ ಘಟನೆ ನಡೆದಿದೆ.
ಬೆಳಗುಂದಿ ಗ್ರಾಮದ ಓಂಕಾರ್ ಮಹಾದೇವ ಹಿಂಡಲಗೇಕರ (23 ವ) ಎಂಬ ಯೋಧ ಮೃತಪಟ್ಟಿದ್ದಾನೆ.
10 ದಿನಗಳ ಹಿಂದೆಯಷ್ಟೇ ರಜೆ ಮೇಲೆ ಬಂದಿರುವ ಈ ಯೋಧ ಬೆಳಗುಂದಿಗೆ ಹೋಗುವಾಗ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನ ವೇಗ ಎಷ್ಟಿತ್ತೆಂದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಭಾರತೀಯ ಸೇನೆಗೆ ಸೇರಿದ್ದನು. ಸಹೋದರನ ಮದುವೆಗಾಗಿ 10 ದಿನಗಳ ಹಿಂದೆ ಊರಿಗೆ ಬಂದಿದ್ದನು. ಕಡೋಲಿಯಲ್ಲಿ ತನ್ನ ಮವನ ಮನೆಯಿಂದ ವಾಪಸ್ ಬೆಳಗುಂದಿಗೆ ಬರುವಾಗ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ.