ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೈನಿಕನಿಗೆ ಬೆಳಗಾವಿ ಎಂಎಲ್‌ಐಆರ್‌ಸಿ ಯೋಧರಿಂದ ಅಂತಿಮ ನಮನ

ಬೆಳಗಾವಿ ತಾಲೂಕಿನ ಬೋಕನೂರ್ ಕ್ರಾಸ್ ಹತ್ತಿರ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯೋಧನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಸ್ತೆ ಅಪಘಾತದಲ್ಲಿ ಸೈನಿಕನೋರ್ವ ದುರ್ಮರಣ ಹೊಂದಿದ್ದಾನೆ. ಮೃತಬ ವ್ಯಕ್ತಿಯನ್ನು ಓಂಕಾರ ಮಹಾದೇವ ಹಿಂಡಲಗೇಕರ (೨೨) ಎಂದು ಗುರುತಿಸಲಾಗಿದೆ.
ಓಂಕಾರ ಹಿಂಡಲಗೇಕರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗುಂದಿ ಕಡೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಬೋಕನೂರ ಕ್ರಾಸ್ ಹತ್ತಿರ ನಿಯಂತ್ರಣ ಕಳೆದುಕೊಂಡು ಕಾರ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ೨೨ ವರ್ಷದ ಯುವ ಯೋಧೋಂಕಾರ್ ಮಹಾದೇವ್ ಹಿಂಡಲಗೇಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಓಂಕಾರ ಹಿಂಡಲಗೇಕರ್ ಅಂತಿಮ ಸಂಸ್ಕಾರವನ್ನು ಇಂದು ಅವರ ಸ್ವ ಗ್ರಾಮವಾದ ಬೆಳಗುಂದಿಯಲ್ಲಿ ಇಂದು ಸಾಯಂಕಾಲ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಈ ವೇಳೆ ಬೆಳಗಾವಿಯ ಎಂಎಲ್‌ಐಆರ್‌ಸಿಯ ಯೋಧರು ಗೌರವ ವಂದನೆಯನ್ನು ಸಲ್ಲಿಸಿದರು.