ಬಾಳೆಹಣ್ಣು ಮತ್ತು ತೆಂಗಿನಕಾಯಿ ದೇವರಿಗೆ ಇವೆರೆಡನ್ನು ಮಾತ್ರ ಅರ್ಪಿಸುತ್ತಾರೆ ಏಕೆ?
ಆರೋಗ್ಯದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಠ ನೈವೇದ್ಯ? ದೇವರು- ಈ ಪದದ ಅರ್ಥ ಹೀಗಿದೆ… ದೇ – ದೇಹವಿಲ್ಲದ. ವ – ವರ್ಣವಿಲ್ಲದ ರು- ರೂಪವಿಲ್ಲದ ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿ ಯಾಕೆ ತೆಗೆದುಕೊಂಡು ಹೋಗುತ್ತೇವೆ?

ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಪವಿತ್ರ
ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಪವಿತ್ರ ಎಂದು ಪರಿಗಣಿಸಲ್ಪಟ್ಟಿವೆ. ಇತರೆ ಹಣ್ಣುಗಳು ಭಾಗಶಃ ತಿನ್ನಲಾದ ಹಣ್ಣುಗಳಾಗಿವೆ. ಅಂದರೆ ಬೇರೆ ಹಣ್ಣುಗಳು ಬೀಜಗಳನ್ನು ಹೊಂದಿರುತ್ತವೆ. ಬೇರೆ ವಿಧವಾದ ಹಣ್ಣುಗಳು ಸಂತಾನೋತ್ಪತ್ತಿ ಮಾಡುವ ಗುಣಗಳನ್ನು ಹೊಂದಿವೆ. ಆದ್ರೆ ತೆಂಗಿನಕಾಯಿ, ಬಾಳೆಹಣ್ಣುಗಳು ಸಂತಾನೋತ್ಪತ್ತಿ ಮಾಡುವ ಹಣ್ಣುಗಳಲ್ಲ ಆದ ಕಾರಣ ಅವು ಪವಿತ್ರ. ಆದ್ದರಿಂದಲೇ ಈ ಎರಡನ್ನೂ ಜನ ತಪ್ಪಿಸದೇ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.
ತೆಂಗಿನಕಾಯಿ ವಿಶೇಷತೆ ಏನು?
ತೆಂಗಿನಕಾಯಿ ಹೊಡೆದು ಅದರ ಚಿಪ್ಪನ್ನು ಎಸೆದರೆ ಅದರಿಂದ ಏನೂ ಬೆಳೆಯುವುದಿಲ್ಲ.ನೀವು ತೆಂಗಿನ ಮರವನ್ನು ಬೆಳೆಸಬೇಕಾದರೆ, ನೀವು ಸಂಪೂರ್ಣ ತೆಂಗಿನಕಾಯಿಯನ್ನು ಬಿತ್ತಬೇಕು. ಆದ್ದರಿಂದಲೇ ತೆಂಗಿನಕಾಯಿ ಪವಿತ್ರ. ತೆಂಗಿನಕಾಯಿ ಹೊರ ಚಿಪ್ಪು ಅಹಂಕಾರವಾಗಿದ್ದು, ಅದನ್ನು ಒಡೆಯಬೇಕು. ಒಮ್ಮೆ ಅಹಂಕಾರ ಚೆಲ್ಲಿದರೆ ಮನಸ್ಸು ಒಳಗಿನ ಬಿಳಿ ಕೋಮಲ ತೆಂಗಿನಕಾಯಿಯಂತೆ ನಿರ್ಮಲವಾಗಿರುತ್ತದೆ. ಭಾವಾವೇಶ ಅಥವಾ ಭಕ್ತಿಯು ಅದರಲ್ಲಿ ಸಿಹಿನೀರಿನಂತೆ ಸುರಿಯುತ್ತದೆ.
ಮೇಲ್ಭಾಗದಲ್ಲಿರುವ 3 ಕಣ್ಣುಗಳು ಸತ್ವ, ರಾಜ ಮತ್ತು ತಮ ಅಥವಾ ಭೂತ, ವರ್ತಮಾನ ಮತ್ತು ಭವಿಷ್ಯ ಅಥವಾ ಸ್ಥೂಲ, ಸೂಕ್ಷ್ಮ ಮತ್ತು ಕರಣ ಶರೀರ ಅಥವಾ ದೇಹ ಇತ್ಯಾದಿ ಎಂದು ಹೇಳಲಾಗುತ್ತದೆ. ಅಲ್ಲದೇ ತೆಂಗಿನಕಾಯಿಯನ್ನು ಸಿಪ್ಪೆ ಸಮೇತ ನೀರಿನ ಕುಂಭದಲ್ಲಿ ಒಂದು ತಿಂಗಳು ಭೂಮಿಯಲ್ಲಿ ಹೂತರೆ ಅದು ಮರವಾಗಿ ಬೆಳೆಯುತ್ತದೆ. ಆದ್ದರಿಂದ ಇದಕ್ಕೆ ಯಾವುದೇ ಪ್ರಾಣಿ ಪಕಿಯ ಎಂಜಲು ಆಗಿರುವುದಿಲ್ಲ. ಅಲ್ಲದೇ ಎಳನೀರಿನಿಂದ ಅಭಿಷೇಕ ಮಾಡಿದರೆ ಪರಿಶುದ್ಧ ಎಂಬ ನಂಬಿಕೆ ಇದೆ.
ಬಾಳೆಹಣ್ಣಿನ ವಿಶೇಷತೆ ಏನು?
ನೀವು ಬಾಳೆಹಣ್ಣು ತಿಂದು ಅದರ ಸಿಪ್ಪೆ ಎಸೆದರೆ, ಅದರಿಂದ ಏನೂ ಬೆಳೆಯುವುದಿಲ್ಲ. ಬಾಳೆ ಕಂದನ್ನು ನೆಟ್ಟರೆ ಮಾತ್ರ ಬಾಳೆ ಗಿಡಗಳು ಬೆಳೆಯುತ್ತವೆ. ಕಂದಿನಿಂದಲೇ ಚಿಗುರೊಡೆಯುವಾಗ ಹಣ್ಣುಗಳನ್ನು ನೀಡುತ್ತದೆ. ಒಮ್ಮೆ ಫಲ ಬಿಟ್ಟರೆ ಅದರ ಆಯಸ್ಸು ಮುಗಿದು ಹೋಗುತ್ತದೆ. ವಿಶೇಷವೆಂದರೆ ಬಾಳೆಗಿಡ ಆಯಸ್ಸು ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸಲಾಗುತ್ತದೆ. ಆದ್ದರಿಂದ ಬಾಳೆ ಹಣ್ಣು ಕೂಡ ಎಂಜಲಾಗದ ಹಣ್ಣು.
ತೆಂಗಿನಕಾಯಿ, ಬಾಳೆಹಣ್ಣಗಳು ಎರಡೂ ಪೂರ್ತಿ ಫಲಗಳು. ಹೀಗಾಗಿ ಇವು ಪವಿತ್ರ. ಇವುಗಳಿಂದ ಭಕ್ತರ ಮನದ ಅಪೇಕ್ಷೆಗಳೂ ನೆರವೇರುವುದು ಖಂಡಿತ ಎಂಬ ಭಾವನೆ ಇದೆ. ಭೂಮಿಯಲ್ಲಿ ಬೆಳೆವ ಎಲ್ಲಾ ಗಿಡದ ಹಣ್ಣುಗಳೂ ಪಶು-ಪಕ್ಷಿಗಳು ಅಥವಾ ಮನುಷ್ಯರು ತಿಂದು ಎಸೆದ ಬೀಜದಿಂದ ಬೆಳೆಯುತ್ತವೆ. ಹೀಗಾಗಿ ಈ ಗಿಡ-ಮರಗಳು ಎಂಜಲಿನಿಂದ ಬೆಳೆದಂತಾಯಿತು. ಇವು ದೇವರಿಗೆ ಅರ್ಪಿಸಲು ನಿಷಿದ್ಧ. ಅಂದರೆ ಇವು ಅಪವಿತ್ರವಾದವು. ಆದರೆ, ತೆಂಗಿನಕಾಯಿ ಮತ್ತು ಬಾಳೆಹಣ್ಣು ಮಾತ್ರ ಈ ವರ್ಗಕ್ಕೆ ಸೇರದ ಫಲಗಳೆನಿಸಿವೆ.
ಇವೆರೆಡನ್ನು ಯಾವುದೇ ಪ್ರಾಣಿ ಪಕ್ಷಿ ಎಂಜಲು ಮಾಡಿರುವುದಿಲ್ಲ.